alex Certify ತಲೆ ತಿರುಗಿಸುವಂತಿದೆ ಬಿಡುಗಡೆಯಾಗಿರುವ ಹೊಸ ಐಫೋನ್ ಬೆಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ತಿರುಗಿಸುವಂತಿದೆ ಬಿಡುಗಡೆಯಾಗಿರುವ ಹೊಸ ಐಫೋನ್ ಬೆಲೆ…!

ಆಪಲ್​ ಹೊಸ ಐಫೋನ್​ 14 ಸರಣಿಯನ್ನು ಬಿಡುಗಡೆ ಮಾಡಿದ್ದು, ಇದು ಫೋನ್​ಗಳ ಅತ್ಯಂತ ದುಬಾರಿ ಆವೃತ್ತಿಗಳನ್ನು ಒಳಗೊಂಡಿದೆ.

ಐಫೋನ್​ 14 ಬೆಲೆ 79,900 ರೂ. ಮತ್ತು ಐಫೋನ್​ 14 ಪ್ಲಸ್​ ಬೆಲೆ 89,900 ರೂ. ಪ್ರೊ ಸರಣಿಯು ಐಫೋನ್​ 14 ಪ್ರೊಗೆ ರೂ 1,29,900 ಮತ್ತು ಐಫೋನ್​ 14 ಪ್ರೊ ಮ್ಯಾಕ್ಸ್​ಗೆ ರೂ. 1,39,900 ರಿಂದ ಪ್ರಾರಂಭವಾಗುತ್ತದೆ.

ಈ ಬೆಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯೇ ನಡೆದಿದೆ. ಇಷ್ಟೊಂದು ಬೆಲೆ ಕೊಟ್ಟು ಕೊಳ್ಳುವ ಬದಲು ಅದೇ ಹಣಕ್ಕೆ ಬೇರೆ ಏನೆಲ್ಲ ಐಟಂ ಸಿಗುತ್ತದೆ ಎಂದು ನೆಟ್ಟಿಗರು ಚರ್ಚೆ ಆರಂಭಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರ ಸೋನಾ ಹೋಮ್​ ಐಟಂಗಳಲ್ಲಿ ಅನೇಕ ವಸ್ತು ಕೊಂಡುಕೊಳ್ಳಬಹುದೆಂಬ ಸಲಹೆ ಇದೆ. ಐಫೋನ್​ ಪ್ರೊ ಮ್ಯಾಕ್ಸ್​ನ ವೆಚ್ಚದಲ್ಲಿ ಕನಿಷ್ಟ ನಿಮ್ಮ ಕೊಠಡಿಯನ್ನು ಅಲಂಕರಿಸಬಹುದಾದಷ್ಟು ಬಳಕೆ ವಸ್ತು ಕೊಂಡುಕೊಳ್ಳಬಹುದು.

1.10 ಲಕ್ಷ ರೂ.ನ ರೋಟಿ ಮೇಕಿಂಗ್​ ಮಷೀನ್​ ಖರೀದಿಬಹುದು, ಇದು ಸಾಕಷ್ಟು ಉಪಯೋಗಕ್ಕೆ ಬರಲಿದೆ. ಅತೀ ದುಬಾರಿ ಎನಿಸಿದ ರಾಯಲ್​ ಗೋಲ್ಡ್ ಬಿರಿಯಾನಿ ಏಳು ಪ್ಲೇಟ್​ ಖರೀದಿಸಲೂಬಹುದು.

ಇನ್ನೂ ಹೇಳಬೇಕೆಂದರೆ ರಣವೀರ್​ ಸಿಂಗ್​ ನಗ್ನ ಫೋಟೋ ಶೂಟ್​ ಮಾಡಿಸಿಕೊಂಡ ಫ್ಲೋರ್​ ಮ್ಯಾಟ್​ ಕೂಡ ಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...