
ಆಪಲ್ ಹೊಸ ಐಫೋನ್ 14 ಸರಣಿಯನ್ನು ಬಿಡುಗಡೆ ಮಾಡಿದ್ದು, ಇದು ಫೋನ್ಗಳ ಅತ್ಯಂತ ದುಬಾರಿ ಆವೃತ್ತಿಗಳನ್ನು ಒಳಗೊಂಡಿದೆ.
ಐಫೋನ್ 14 ಬೆಲೆ 79,900 ರೂ. ಮತ್ತು ಐಫೋನ್ 14 ಪ್ಲಸ್ ಬೆಲೆ 89,900 ರೂ. ಪ್ರೊ ಸರಣಿಯು ಐಫೋನ್ 14 ಪ್ರೊಗೆ ರೂ 1,29,900 ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ಗೆ ರೂ. 1,39,900 ರಿಂದ ಪ್ರಾರಂಭವಾಗುತ್ತದೆ.
ಈ ಬೆಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯೇ ನಡೆದಿದೆ. ಇಷ್ಟೊಂದು ಬೆಲೆ ಕೊಟ್ಟು ಕೊಳ್ಳುವ ಬದಲು ಅದೇ ಹಣಕ್ಕೆ ಬೇರೆ ಏನೆಲ್ಲ ಐಟಂ ಸಿಗುತ್ತದೆ ಎಂದು ನೆಟ್ಟಿಗರು ಚರ್ಚೆ ಆರಂಭಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರ ಸೋನಾ ಹೋಮ್ ಐಟಂಗಳಲ್ಲಿ ಅನೇಕ ವಸ್ತು ಕೊಂಡುಕೊಳ್ಳಬಹುದೆಂಬ ಸಲಹೆ ಇದೆ. ಐಫೋನ್ ಪ್ರೊ ಮ್ಯಾಕ್ಸ್ನ ವೆಚ್ಚದಲ್ಲಿ ಕನಿಷ್ಟ ನಿಮ್ಮ ಕೊಠಡಿಯನ್ನು ಅಲಂಕರಿಸಬಹುದಾದಷ್ಟು ಬಳಕೆ ವಸ್ತು ಕೊಂಡುಕೊಳ್ಳಬಹುದು.
1.10 ಲಕ್ಷ ರೂ.ನ ರೋಟಿ ಮೇಕಿಂಗ್ ಮಷೀನ್ ಖರೀದಿಬಹುದು, ಇದು ಸಾಕಷ್ಟು ಉಪಯೋಗಕ್ಕೆ ಬರಲಿದೆ. ಅತೀ ದುಬಾರಿ ಎನಿಸಿದ ರಾಯಲ್ ಗೋಲ್ಡ್ ಬಿರಿಯಾನಿ ಏಳು ಪ್ಲೇಟ್ ಖರೀದಿಸಲೂಬಹುದು.
ಇನ್ನೂ ಹೇಳಬೇಕೆಂದರೆ ರಣವೀರ್ ಸಿಂಗ್ ನಗ್ನ ಫೋಟೋ ಶೂಟ್ ಮಾಡಿಸಿಕೊಂಡ ಫ್ಲೋರ್ ಮ್ಯಾಟ್ ಕೂಡ ಕೊಳ್ಳಬಹುದು.