ವಿಮಾ ಯೋಜನೆಗಳನ್ನು ಆಯ್ಕೆ ಮಾಡುವಾಗ ಸಾಮಾನ್ಯವಾಗಿ ಜನರ ಮೊದಲ ಆದ್ಯತೆ ಎಲ್ಐಸಿಯಾಗಿರುತ್ತದೆ. ದೇಶವಾಸಿಗಳಲ್ಲಿ ಎಲ್ಐಸಿ ಜೊತೆಗೆ ಒಂದು ಭಾವನಾತ್ಮಕ ಸಂಬಂಧವಿದೆ.
ಎಲ್ಐಸಿಯು ನಿರ್ದಿಷ್ಟ ಗುಂಪಿನ ಜನರಿಗಾಗಿ ವಿಶೇಷ ಯೋಜನೆಗಳನ್ನು ತರುತ್ತಲೇ ಇರುತ್ತದೆ. ಎಲ್ಲಾ ವಯಸ್ಸಿನವರಿಗೂ ವಿವಿಧ ವಿಮಾ ಆಯ್ಕೆಗಳನ್ನು ನೀಡುತ್ತದೆ. ನಿಗಮವು ಪರಿಚಯಿಸಿದ ಅತ್ಯಂತ ಪ್ರಯೋಜನಕಾರಿ ಪಾಲಿಸಿಗಳಲ್ಲಿ ಎಲ್ಐಸಿ ಜೀವನ್ ಶಿರೋಮಣಿ ಪ್ರಮುಖವಾದದ್ದು.
ಜೀವನ್ ಶಿರೋಮಣಿ ಪಾಲಿಸಿಯು ರೂ. 1 ಕೋಟಿಯ ಮೂಲ ವಿಮಾ ಮೊತ್ತವನ್ನು ಒದಗಿಸುತ್ತದೆ, ಮತ್ತು ಪಾಲಿಸಿದಾರರು ಲಾಭವನ್ನು ಪಡೆಯುವ ಮೊದಲು ಕೇವಲ ನಾಲ್ಕು ವರ್ಷಗಳವರೆಗೆ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿರಬೇಕಾಗುತ್ತದೆ.
ಇದು ಸೀಮಿತ ಪ್ರೀಮಿಯಂ ಪಾವತಿಯ ಮನಿ ಬ್ಯಾಕ್ ನೀಡುತ್ತದೆ. ನಿರ್ದಿಷ್ಟವಾಗಿ ಹೆಚ್ಚಿನ ಹೈ ನೆಟ್ ವರ್ತ್ ಕೆಟಗರಿಗೆ ಸೇರಿದವರಿಗಾಗಿ ರೂಪಿಸಲಾಗಿದೆ. ಈ ಪಾಲಿಸಿಯು ನಾಲ್ಕು ಮೆಚುರಿಟಿಗಳನ್ನು ಹೊಂದಿದೆ. 14, 16, 18 ಮತ್ತು 20 ವರ್ಷಗಳಂತೆ ಗುರುತಿಸಲಾಗಿದೆ. ಪಾಲಿಸಿದಾರರು ಮಾಸಿಕ ಪ್ರೀಮಿಯಂ ಸುಮಾರು 94,000 ರೂ. ಪಾವತಿಸಿದರೆ ಹೆಚ್ಚಿನ ಬೆನಿಫಿಟ್ ಪಡೆಯುವರು.
ಯೋಜನೆಗೆ ಅರ್ಹರಾಗಲು ಕನಿಷ್ಠ ವಯಸ್ಸು 18 ಆಗಿರಬೇಕು. 14 ವರ್ಷಗಳ ಪಾಲಿಸಿ ನಿಯಮಕ್ಕಾದರೆ ಗರಿಷ್ಠ ವಯೋಮಿತಿ 55 ವರ್ಷಗಳು. ಇದೇ ರೀತಿ 16 , 18 ವರ್ಷಗಳ ಅವಧಿಗೆ ವಯೋಮಿತಿ ಬದಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಎಲ್ಐಸಿಯನ್ನು ಸಂಪರ್ಕಿಸಬಹುದು.