ಭವಿಷ್ಯದ ಉಳಿತಾಯಕ್ಕೆಂದು ಹೂಡಿಕೆ ಮಾಡಲು ದೇಶವಾಸಿಗಳಿಗೆ ಫೇವರಿಟ್ ಆಯ್ಕೆಗಳಲ್ಲಿ ಒಂದಾದ ಎಲ್‌ಐಸಿ ಯಾವಾಗಲು ಸುರಕ್ಷಿತ ರಿಟರ್ನ್ಸ್ ನೀಡಲು ಸೇಫ್ ಬೆಟ್ ಎಂದೇ ಹೇಳಬಹುದು.
ಇಂತಿಪ್ಪ ಎಲ್‌ಐಸಿಯ ಜೀವನ್ ಪ್ರಗತಿ ಯೋಜನೆ ಮೂಲಕ ಮೆಚ್ಯೂರಿಟಿ ವೇಳೆಗೆ 28 ಲಕ್ಷ ರೂಪಾಯಿಗಳ ರಿಟರ್ನ್ಸ್ ಅನ್ನು ನೀವು ಪಡೆಯಬಹುದಾಗಿದೆ.
ಪ್ರತಿ ತಿಂಗಳು 6000 ರೂಪಾಯಿಯಂತೆ 20 ವರ್ಷಗಳ ಕಾಲಾವಧಿಗೆ ಹೂಡಿಕೆ ಮಾಡುತ್ತಾ ಸಾಗಿದಲ್ಲಿ, ಮೆಚ್ಯೂರಿಟಿ ಅವಧಿಗೆ 28 ಲಕ್ಷ ರೂಪಾಯಿ ನಿಮ್ಮದಾಗುತ್ತದೆ. ಇದರೊಂದಿಗೆ ರಿಸ್ಕ್ ಕವರ್ ಲಾಭಗಳನ್ನೂ ಸಹ ಯೋಜನೆ ಹೊಂದಿದೆ.
ಸ್ನೇಹಿತರು ನೀಡಿದ ಉಡುಗೊರೆ ನೋಡಿ ಪೆಚ್ಚಾದ ವಧು
ಒಂದು ವೇಳೆ ಹೂಡಿಕೆದಾರರು ಮೃತಪಟ್ಟಲ್ಲಿ ನಿಮ್ಮ ನಾಮಿನಿಗೆ ಮೆಚ್ಯೂರಿಟಿ ಅವಧಿ ಬಳಿಕ ನಿರ್ದಿಷ್ಟ ಮೊತ್ತವೊಂದು ಬಂದು ಸೇರಲಿದೆ.
12 ವರ್ಷ ಮೇಲ್ಪಟ್ಟವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು, ಗರಿಷ್ಠ 20 ವರ್ಷಗಳವರೆಗೆ ಪಾಲಿಸಿ ಅವಧಿ ಇರಲಿದೆ.