ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಚರ್ಚೆ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಭೇಟಿ ಬಳಿಕ ಮಾತನಾಡಿದ ಶಾಸಕ ರೇಣುಕಾಚಾರ್ಯ, ಈಗಿರುವ ಸಚಿವರ ವಿರುದ್ಧ ನಮ್ಮ ಆಕ್ರೋಶವಿಲ್ಲ. ಆದರೆ ಸಚಿವ ಸಂಪುಟ ವಿಸ್ತರಣೆ ಈಗಾಗಲೇ ತಡವಾಗಿದೆ. ಸ್ವಾರ್ಥಕ್ಕಾಗಿ ಸಚಿವರಾದವರನ್ನು ಸಂಪುಟದಿಂದ ಕೈಬಿಡಬೇಕು. ಸಮರ್ಥರಿಗೆ ಅವಕಾಶ ಕೊಡಬೇಕು ಎಂದರು.
ಬಟ್ಟೆಗಿಂತ ಈ ಮಾಸ್ಕ್ ಸುರಕ್ಷಿತ: ಎನ್ 95 ಮಾಸ್ಕ್ ಗಳ ಬಳಕೆಗೆ ಸಲಹೆ ನೀಡಿದ ಸಿಡಿಸಿ
ವ್ಯಕ್ತಿಯ ಸಾಮರ್ಥ್ಯ ಗೊತ್ತಾಗಲು ಒಂದಷ್ಟು ಕಾಲ ಬೇಕು. ಇನ್ನೊಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಪಕ್ಷ ಸಂಘಟನೆ, ಅಭಿವೃದ್ಧಿ ಕೆಲಸ ಮಾಡುವವರಿಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ತಕ್ಷಣ ಸಂಪುಟ ವಿಸ್ತರಣೆಯಾಗಬೇಕು ಎಂದು ಹೇಳಿದರು.
ಇನ್ನು ಯತ್ನಾಳ್ ಭೇಟಿ ವಿಚಾರವಾಗಿ ಮಾತನಾಡಿದ ರೇಣುಕಾಚಾರ್ಯ, ಯತ್ನಾಳ್ ಹಾಗೂ ನನ್ನ ನಡುವೆ ಬಹಳ ವರ್ಷದ ಆತ್ಮೀಯತೆ ಇದೆ. ಹಿರಿಯ ಹಾಗೂ ಅನುಭವಿ ರಾಜಕಾರಣಿ. ಪ್ರಸ್ತುತ ರಾಜಕಾರಣದ ಬಗ್ಗೆ ಸಚಿವ ಸ್ಥಾನದ ಬಗ್ಗೆ ಈಗಾಗಲೇ ನಾವಿಬ್ಬರೂ ಚರ್ಚೆ ಮಾಡಿದ್ದೇವೆ. ಬಿಜೆಪಿಯಲ್ಲಿ ಯಾವುದೇ ಶಾಸಕರ ಸಹಿ ಸಂಗ್ರಹವನ್ನು ಮಾಡಿಲ್ಲ. ಪಕ್ಷಕ್ಕಾಗಿ ದುಡಿಯುವವರಿಗೆ ನಿಷ್ಠೆಯಿಂದ ಕೆಲಸ ಮಾಡುವವರಿಗೆ ಸಚಿವ ಸ್ಥಾನ ಸಿಗಬೇಕು ಎಂಬುದು ನಮ್ಮಿಬ್ಬರ ಆಶಯವಾಗಿದೆ ಎಂದು ತಿಳಿಸಿದ್ದಾರೆ.