alex Certify ಹೆದ್ದಾರಿಯಲ್ಲಿ ಅಪರಿಚಿತ ವ್ಯಕ್ತಿ ವರ್ತಿಸಿದ್ದು ನೋಡಿದ್ರೆ ನೀವೂ ದಂಗಾಗ್ತೀರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆದ್ದಾರಿಯಲ್ಲಿ ಅಪರಿಚಿತ ವ್ಯಕ್ತಿ ವರ್ತಿಸಿದ್ದು ನೋಡಿದ್ರೆ ನೀವೂ ದಂಗಾಗ್ತೀರಾ….!

ಅಪರಿಚಿತ ವ್ಯಕ್ತಿಯೊಬ್ಬ ಫ್ಲೈಓವರ್​ ಬ್ರಿಡ್ಜ್​​ನಲ್ಲಿ ಅವಾಂತರ ಸೃಷ್ಟಿಸಿದ ಘಟನೆ ಸೂರತ್​​ನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಈ ರೀತಿ ವಿಚಿತ್ರವಾಗಿ ವರ್ತಿಸಿದ ವ್ಯಕ್ತಿ  ಬಹುಶಃ ಯಾವುದೋ ಮಾದಕ ವಸ್ತುವನ್ನು ಸೇವಿಸಿದ್ದಿರಬಹುದು ಎಂದು ಶಂಕಿಸಲಾಗಿದೆ.

ಈತ ಹೆದ್ದಾರಿಯಲ್ಲಿದ್ದ ಕೆಲ ಕಾರುಗಳಿಗೆ ಹಾನಿ ಮಾಡಿದ್ದು ಮಾತ್ರವಲ್ಲದೇ ಸಂಚಾರ ದಟ್ಟಣೆ ಉಂಟಾಗಲು ಕಾರಣನಾಗಿದ್ದಾನೆ.

ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರುಗಳ ನಂಬರ್​ ಪ್ಲೇಟ್​ಗಳಿಗೆ ಹಾನಿ ಮಾಡಿದ್ದಾನೆ. ಇನ್ನು ಕೆಲ ಕಾರುಗಳ ಟಾಪ್​ ಮೇಲೆಯೇ ಏರಿ ಕಾರಿನ ಮೇಲ್ಛಾವಣಿ ಜಖಂಗೊಳಿಸಿದ್ದಾನೆ. ಕಾರಿನ ವೈಪರ್​, ಕನ್ನಡಿ ಹಾಗೂ ಮುಂದಿನ ಗಾಜುಗಳನ್ನು ಒಡೆದು ಹಾಕಿದ್ದಾನೆ. ಈತನ ಹುಚ್ಚಾಟಿಕೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...