ಅಪರಿಚಿತ ವ್ಯಕ್ತಿಯೊಬ್ಬ ಫ್ಲೈಓವರ್ ಬ್ರಿಡ್ಜ್ನಲ್ಲಿ ಅವಾಂತರ ಸೃಷ್ಟಿಸಿದ ಘಟನೆ ಸೂರತ್ನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಈ ರೀತಿ ವಿಚಿತ್ರವಾಗಿ ವರ್ತಿಸಿದ ವ್ಯಕ್ತಿ ಬಹುಶಃ ಯಾವುದೋ ಮಾದಕ ವಸ್ತುವನ್ನು ಸೇವಿಸಿದ್ದಿರಬಹುದು ಎಂದು ಶಂಕಿಸಲಾಗಿದೆ.
ಈತ ಹೆದ್ದಾರಿಯಲ್ಲಿದ್ದ ಕೆಲ ಕಾರುಗಳಿಗೆ ಹಾನಿ ಮಾಡಿದ್ದು ಮಾತ್ರವಲ್ಲದೇ ಸಂಚಾರ ದಟ್ಟಣೆ ಉಂಟಾಗಲು ಕಾರಣನಾಗಿದ್ದಾನೆ.
ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರುಗಳ ನಂಬರ್ ಪ್ಲೇಟ್ಗಳಿಗೆ ಹಾನಿ ಮಾಡಿದ್ದಾನೆ. ಇನ್ನು ಕೆಲ ಕಾರುಗಳ ಟಾಪ್ ಮೇಲೆಯೇ ಏರಿ ಕಾರಿನ ಮೇಲ್ಛಾವಣಿ ಜಖಂಗೊಳಿಸಿದ್ದಾನೆ. ಕಾರಿನ ವೈಪರ್, ಕನ್ನಡಿ ಹಾಗೂ ಮುಂದಿನ ಗಾಜುಗಳನ್ನು ಒಡೆದು ಹಾಕಿದ್ದಾನೆ. ಈತನ ಹುಚ್ಚಾಟಿಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.