alex Certify ಕರೀನಾಳನ್ನೇ ಹೋಲುವ ಯುವತಿಯ ವಿಡಿಯೋ ವೈರಲ್​: ನೆಟ್ಟಿಗರಿಂದ ಅಚ್ಚರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರೀನಾಳನ್ನೇ ಹೋಲುವ ಯುವತಿಯ ವಿಡಿಯೋ ವೈರಲ್​: ನೆಟ್ಟಿಗರಿಂದ ಅಚ್ಚರಿ

ಬಾಲಿವುಡ್ ಟಾಪ್ ನಟಿ ಕರೀನಾ ಕಪೂರ್ ಖಾನ್ ಅವರ ಮುಖಚಹರೆ ಹೋಲುವ ಮಹಿಳೆ ಅಸ್ಮಿತಾ ಅವರ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಈಕೆ ಕೇವಲ ಕರೀನಾ ಅವರನ್ನು ಹೋಲುವುದಿಲ್ಲ, ಬದಲಿಗೆ ಅವರಂತೆಯೇ ಸರಳವಾದ ಹುಬ್ಬು ಏರಿಳಿತದಿಂದ ಹಿಡಿದು ನಗುವಿನವರೆಗೆ ಎಲ್ಲವೂ ಕರೀನಾ ಇದ್ದಂತೆಯೇ ಇದೆ.

ಅಷ್ಟೇ ಅಲ್ಲದೇ ಅಸ್ಮಿತಾ ಅವರು ಕರೀನಾರ ಪ್ರತಿಯೊಂದು ಅಭಿವ್ಯಕ್ತಿಯನ್ನು ಅನುಕರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕರೀನಾ ಅವರ ಐಕಾನಿಕ್ ನಗಾಡ ನಗಾಡಾ ಹಾಡಿಗೆ ಅಸ್ಮಿತಾ ಲಿಪ್-ಸಿಂಕ್ಸಿಂಗ್ ಮತ್ತು ಗ್ರೂವಿಂಗ್ ಮಾಡುವ ವಿಡಿಯೋ ವೈರಲ್​ ಆಗಿದ್ದು, ನಿಜಕ್ಕೂ ಈಕೆ ಕರೀನಾಳ ಅವಳಿ ಸಹೋದರಿ ಇರಬಹುದು ಎನ್ನಿಸುತ್ತದೆ.

ಆನ್‌ಲೈನ್‌ನಲ್ಲಿ ಶೇರ್ ಆದ ಕೆಲವೇ ಕ್ಷಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಅಸ್ಮಿತಾ ಅವರು ಗುಲಾಬಿ ಬಣ್ಣದ ಬಟ್ಟೆ ತೊಟ್ಟು ಕರೀನಾರಂತೆ ನೃತ್ಯದ ಚಲನೆ ಮಾಡಿದ್ದಾರೆ. ಕರೀನಾ ಕಪೂರ್‌ ಹಾಗೂ ಅಸ್ಮಿತಾರ ಹೋಲಿಕೆ ಕಂಡು ನೆಟ್ಟಿಗರು ತಮಾಷೆಯ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...