ಯೂಟ್ಯೂಬರ್ ಮತ್ತು ಕಂಟೆಂಟ್ ಕ್ರಿಯೇಟರ್ ಖಬಾನೆ ಲೇಮ್ ಇಂಟರ್ನೆಟ್ನ ದೊಡ್ಡ ಸೆಲೆಬ್ರಿಟಿ. ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೋಲ್ ಮಾಡುವಾಗ ಅವರ ರೀಲ್ಗಳು ಸಾಮಾನ್ಯವಾಗಿ ಕಂಡಿರುತ್ತದೆ. ಖಬಿ ಲೇಮ್ ಎಂದೇ ಜನಪ್ರಿಯವಾಗಿದೆ.
ಅವರು ಲೈಫ್ ಹ್ಯಾಕ್ ವಿಡಿಯೊಗಳನ್ನು ಪೋಸ್ಟ್ ಮಾಡಲು ಪ್ರಸಿದ್ಧರಾಗಿದ್ದು, ಹೆಚ್ಚು ಸಂಕೀರ್ಣ ವಿಷಯಗಳನ್ನು ಸರಳ ರೀತಿಯಲ್ಲಿ ನ್ಯಾವಿಗೇಟ್ ಮಾಡುತ್ತಾರೆ. ಆದರೆ ಒಂದೇ ಪದವನ್ನು ಉಚ್ಚರಿಸದೆ ಈ ಸಾಹಸ ಮಾಡುತ್ತಾರೆ.
ಕುತೂಹಲಕಾರಿ ಎಂದರೆ 22 ವರ್ಷ ವಯಸ್ಸಿನ ಈ ಕಂಟೆಂಟ್ ಕ್ರಿಯೇಟರ್ ತಮ್ಮ ವಿಡಿಯೊದಲ್ಲಿ ಯಾವುದೇ ಪದವನ್ನು ಹೇಳದಿದ್ದರೂ ಸಹ ಸಾಮಾಜಿಕ ಮಾಧ್ಯಮದಲ್ಲಿ 200 ಮಿಲಿಯನ್ ಫಾಲೋಯರ್ ಹೊಂದಿದ್ದಾರೆ.
ಈಗ ಅವರು ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಮಾತನಾಡಿದ್ದು, ಇದೇ ವಿಷಯ ಭಾರೀ ಚರ್ಚೆಯಲ್ಲಿದೆ. ಇಟಲಿಯ ಚಿವಾಸ್ಸೊದ ಟಿಕ್ಟಾಕ್ನ ಹೆಚ್ಚು ಫೇಮಸ್ ಆಗಿರುವ ಕಂಟೆಂಟ್ ಕ್ರಿಯೇಟರ್ ಸಂದರ್ಶಿಸಿದ್ದಾರೆ, ಅವರು ಖಾಬಿಯೊಂದಿಗೆ ಮಾತನಾಡಲು ಮತ್ತು ಅವರ ಕಥೆಯನ್ನು ಪ್ರಪಂಚದೊಂದಿಗೆ ಹಂಚಿಕೊಂಡಿಕೊಂಡಿದ್ದಾರೆ.
ಅವರು ಪ್ರಪಂಚದಾದ್ಯಂತ ಖ್ಯಾತಿಯನ್ನು ಗಳಿಸುವ ಮೊದಲು, ಕಾರ್ಖಾನೆಯ ಕೆಲಸಗಾರರಾಗಿದ್ದರು. ಮುಂದೆ ತನ್ನ ಕುಟುಂಬದೊಂದಿಗೆ ಸೆನೆಗಲ್ನಿಂದ ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ಖಾಬಿ ಇಟಲಿಗೆ ತೆರಳಿದ್ದಾರೆ.
ಇತ್ತೀಚೆಗೆ ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್ ಬೈನಾನ್ಸ್ ತಮ್ಮ ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿ ಖಾಬಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಖಾಬಿ ಕಷ್ಟದ ದಿನಗಳು ಕರಗಿದ್ದು, ಈಗ ಅವರ ಅಂದಾಜು ನಿವ್ವಳ ಮೌಲ್ಯವು 1&2 ಮಿಲಿಯನ್ ಇವೆ ಎಂದು ವರದಿಗಳು ಉಲ್ಲೇಖಿಸುತ್ತವೆ.