alex Certify ಬೆಚ್ಚಿಬೀಳಿಸುವಂತಿದೆ 2021 ರ ಕುರಿತ ನಾಸ್ಟ್ರಾಡಾಮಸ್ ಭವಿಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ 2021 ರ ಕುರಿತ ನಾಸ್ಟ್ರಾಡಾಮಸ್ ಭವಿಷ್ಯ

Zombie Apocalypse, Famines and Asteroids: These Are Nostradamus' Scary Predictions for 2021

ಭಾರೀ ಸಂಕಟಮಯ ವರ್ಷವೊಂದು ಕಳೆದು ಹೋದ ನಿರಾಳತೆ ಏನಾದರೂ ನಿಮ್ಮ ತಲೆಯಲ್ಲಿ ಬರುತ್ತಿದ್ದರೆ ಸ್ವಲ್ಪ ತಾಳಿ…!

2021ರಲ್ಲಿ ಭಾರೀ ಅನಾವೃಷ್ಟಿ, ಕ್ಷುದ್ರ ಗ್ರಹಗಳು ಬಡಿಯುವ ಹಾಗೂ ದೆವ್ವಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಇವೆ ಎಂದು ಫ್ರೆಂಚ್‌ ಭೌತಶಾಸ್ತ್ರಜ್ಞ ಮೈಕೇಲ್ ಡಿ ನಾಸ್ಟ್ರೋಡಾಮಸ್‌ ಹೇಳಿದ್ದಾನೆ ಎನ್ನಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಈತನ ಅಂದಾಜುಗಳೆಲ್ಲಾ ನಿಜವಾಗಿವೆಯಂತೆ.

ಲೆಸ್ ಪ್ರೊಫೇಟಿಸ್ ಎಂಬ ಪುಸ್ತಕವನ್ನು ಬರೆದಿರುವ ನಾಸ್ಟ್ರಾಡಾಮಸ್, ಅದರಲ್ಲಿ ಈ ಮೇಲ್ಕಂಡ ಅಂದಾಜುಗಳನ್ನು ಮಾಡಿದ್ದಾನಂತೆ. ಐದು ಶತಮಾನಗಳ ಹಿಂದೆ ಈ ಪುಸ್ತಕ ಬರೆಯಲಾಗಿದೆಯಾದರೂ ಸಹ ಇಂದಿಗೂ ಇದು ಪ್ರಸ್ತುತವಾಗಿದೆ.

ಅಡಾಲ್ಫ್‌ ಹಿಟ್ಲರ್‌ನ ಏರುಗತಿಯೊಂದಿಗೆ ವಿಶ್ವ ಮಹಾಯುದ್ಧದ ಬಗೆಗಿನ ಈತನ ಭವಿಷ್ಯ ನಿಜವಾಗಿರುವ ಕಾರಣ ಇದೀಗ ಆತನ ಪುಸ್ತಕಗಳನ್ನು ಓದುವ ಮಂದಿ 2021 ರ ಬಗ್ಗೆಯೂ ಈತ ಹೇಳಿರುವುದು ನಿಜವಾಗುವುದೆಂಬ ಭಯದಲ್ಲಿ ಇದ್ದಾರೆ.

ಕೆಲ ಯುವಕರು ಅರ್ಧ ಸತ್ತಿದ್ದು, ಅವುಗಳ ಪ್ರೇತಾತ್ಮಗಳೆಲ್ಲಾ ನಮ್ಮ ಸುತ್ತ ಗಿರಕಿ ಹಾಕುತ್ತಿರುತ್ತವೆ ಎಂದಿದ್ದಾನೆ. ಇದೇ ವೇಳೆ ಜೈವಿಕ ಅಸ್ತ್ರವೊಂದನ್ನು ರಷ್ಯಾದ ವಿಜ್ಞಾನಿಯೊಬ್ಬ ಸಿದ್ಧಪಡಿಸುತ್ತಿದ್ದು, ಅದು ನಮ್ಮನ್ನೆಲ್ಲಾ ನಾಶ ಮಾಡಬಲ್ಲದು ಎಂದು ನಾಸ್ಟ್ರಾಡಾಮಸ್ ಈ ಪುಸ್ತಕದಲ್ಲಿ ಬರೆದಿದ್ದಾನೆ.

ಇದೇ ವೇಳೆ ಸಾಂಕ್ರಮಿಕಗಳು, ಬರ ಹಾಗೂ ಭೂಕಂಪನಗಳಂಥ ಪ್ರಾಕೃತಿಕ ವಿಕೋಪದಿಂದ ಜನರ ತತ್ತರಿಸುವುದರೊಂದಿಗೆ ಮುಂದಿನ ವರ್ಷಗಳಲ್ಲಿ ಕೊರೋನಾಗಿಂತಲೂ ಇನ್ನೂ ಭಯಂಕರವಾದ ವೈರಸ್‌ಗಳು ನಮಗೆ ಕಾಟ ಕೊಡಲಿವೆ ಎನ್ನುತ್ತದೆ ಈ ಬುಕ್.

ಮುಂದಿನ ದಿನಗಳಲ್ಲಿ ಭೂಮಿಯ ಮೇಲೆ ಉಲ್ಕೆಯೊಂದು ಬಂದು ಬೀಳಲಿದೆ ಎಂದು ನಾಸ್ಟ್ರಾಡಾಮಸ್ ಹೇಳಿರುವ ಮಾತುಗಳನ್ನು ಅಮೆರಿಕದ ನಾಸಾದ ಮುನ್ಸೂಚನೆ ಸಹ ಸ್ಪಷ್ಟಪಡಿಸುತ್ತಿದೆ. ಇವೆಲ್ಲಾ ಸಾಕಾಗದೇ ಇದ್ದಲ್ಲಿ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೂಕಂಪನವೊಂದು ಸಂಭವಿಸುವ ಸಾಧ್ಯತೆ ಬಗೆಗೂ ಪುಸ್ತಕದಲ್ಲಿ ಉಲ್ಲೇಖವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...