ಬಹಳ ಚಿಕ್ಕದಾದ ಮನೆಯಲ್ಲಿ ವಾಸ ಮಾಡುವ ಅನುಭವದ ಬಗ್ಗೆ ನೀವೇನಾದರೂ ಆಲೋಚನೆ ಮಾಡಿದ್ದಲ್ಲಿ, ಯೂಟ್ಯೂಬರ್ ರ‍್ಯಾನ್ ಟರ್ಹಾನ್‌ರ ಲೇಟೆಸ್ಟ್ ವಿಡಿಯೋವನ್ನು ವೀಕ್ಷಿಸಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ಬಲೇ ಫೇಮಸ್ ಆಗಿರುವ ಏರ್‌ಬಿಎನ್ಬಿ ಮಾದರಿಯ ಮನೆ ಇದಾಗಿದೆ.
ಬೋಸ್ಟನ್‌ನ ಹಾರ್ವಡ್ ವಿವಿಯಲ್ಲಿ ಈ ಪುಟ್ಟ ಮನೆಯೊಂದನ್ನು ನಿಲ್ಲಿಸಲಾಗಿತ್ತು. ಶಿಲ್ಪಿ ಜೆಫ್ ಸ್ಮಿತ್ ನಿರ್ಮಿಸಿರುವ ಈ ಚಲಿಸುವ ಮನೆಯನ್ನು ರ‍್ಯಾನ್ ಬಾಡಿಗೆಗೆ ಪಡೆದಿದ್ದಾರೆ. 24 ಗಂಟೆಗಳ ಮಟ್ಟಿಗೆ 25 ಚದರ ಅಡಿಯ ಈ ಮನೆಯನ್ನು ಬಾಡಿಗೆಗೆ ಪಡೆದಿರುವ ರ‍್ಯಾನ್ ತಮ್ಮ ಅನುಭವವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಫ್ರಿಡ್ಜ್ ಹಾಗೂ ಶಾಪಿಂಗ್ ಕಾರ್ಟ್‌ಗಳ ಜೊತೆಗೆ ಈ ಮನೆಯನ್ನು ಹೋಲಿಕೆ ಮಾಡಿದ ರ‍್ಯಾನ್, ಅದರೊಳಗೆ ಇರುವುದು ಅದೆಷ್ಟು ಕ್ಲಿಷ್ಟಕರ ಎಂದು ತೋರಿದ್ದಾರೆ. ಆರೂವರೆ ಅಡಿ ಇರುವ ಕುಸ್ತಿ ಪಟು ಡ್ವೇನ್ ’ದಿ ರಾಕ್’ ಈ ಮನೆಯೊಳಗೆ ತೂರಲಾರರು ಎಂದು ರ‍್ಯಾನ್ ಹೋಲಿಕೆಯನ್ನೂ ಕೊಟ್ಟಿದ್ದಾರೆ.