alex Certify ಅಚಾನಕ್‌ ಆಗಿ ಲಭಿಸಿದ ಹಣ ಕಂಡು ದಾರಿಹೋಕನಿಗೆ ಶಾಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚಾನಕ್‌ ಆಗಿ ಲಭಿಸಿದ ಹಣ ಕಂಡು ದಾರಿಹೋಕನಿಗೆ ಶಾಕ್…!

YouTuber Gives Away $2021 to Strangers to Kickstart New Year, Their Priceless Reactions Win Internet

ಮನುಕುಲದ ಪಾಲಿಗೆ 2020 ಅತ್ಯಂತ ಕಠಿಣ ವರ್ಷವಾಗಿದ್ದು, ಬಹಳಷ್ಟು ಜನರ ಪ್ರೀತಿಪಾತ್ರರನ್ನು ಕಿತ್ತುಕೊಂಡ ಕೊರೊನಾ ವೈರಸ್‌ ಕಾಟ ಇನ್ನೂ ಮುಗಿದಿಲ್ಲ. ಇದೀಗ 2021 ಆರಂಭಗೊಂಡಿದ್ದು, ಈ ವರ್ಷವಾದರೂ ಎಲ್ಲ ಸರಿಹೋಗಲಿ ಎಂದು ಜನರು ಆಶಿಸುತ್ತಿದ್ದಾರೆ.

ಜನರಲ್ಲಿ ಹೊಸ ಭರವಸೆ ಮೂಡಿಸುವ ಪ್ರಯತ್ನವೊಂದರಲ್ಲಿ ಯೂಟ್ಯೂಬರ್‌ ಒಬ್ಬರು ದಾರಿಯಲ್ಲಿ ಸಿಕ್ಕ ಅಪರಿಚಿತರಿಗೆ $2021 ಕೊಡುವ ಮೂಲಕ ಅವರ ಮೊಗದಲ್ಲಿ ಮಂದಹಾಸ ಮೂಡಿಸಲು ಯತ್ನಿಸಿದ್ದಾರೆ.

ಪ್ರಾಂಕ್‌ಗಳು ಹಾಗೂ ಸಾಮಾಜಿಕ ಪ್ರಯೋಗಗಳನ್ನು ಮಾಡುವ ಜನಪ್ರಿಯ ಯೂಟ್ಯೂಬ್‌ ಚಾನೆಲ್ ಒಂದರ ನಿಯಂತ್ರಕ ಜುವಾನ್ ಗೊನ್ಝಾಲೆಜ್ ಈ ಕೆಲಸಕ್ಕೆ ಮುಂದಾಗಿದ್ದಾರೆ. ತಮ್ಮ ಕೈಂಕರ್ಯದ ವಿಡಿಯೋವನ್ನು ಪೋಸ್ಟ್ ಮಾಡಿರುವ ಜುವಾನ್, “ಹೊಸ ವರ್ಷ ಆರಂಭಿಸಲು ಜನರಿಗೆ $2021 ಕೊಡುತ್ತಿದ್ದೇನೆ,” ಎಂದು ಕ್ಯಾಪ್ಷನ್ ಹಾಕಿದ್ದಾರೆ. ಜುವಾನ್‌ರ ಈ ಹೃದಯ ವೈಶಾಲ್ಯತೆಯನ್ನು ನೆಟ್ಟಿಗರು ಮೆಚ್ಚಿಕೊಂಡಾಡಿದ್ದಾರೆ.

ಈ ಹಿಂದೆ ಇದೇ ಯೂಟ್ಯೂಬರ್,‌ ಬಸ್‌ ನಿಲ್ದಾಣದಲ್ಲಿ ಬಸ್‌ ಗಾಗಿ ಕಾಯುತ್ತಿದ್ದವರಿಗೆ ಕಾರನ್ನೇ ಗಿಫ್ಟ್‌ ಆಗಿ ಸುದ್ದಿಯಾಗಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...