alex Certify ಮಾಜಿ ಅಧ್ಯಕ್ಷ‌ ಡೊನಾಲ್ಡ್​ ಟ್ರಂಪ್​​ಗೆ ಯುಟ್ಯೂಬ್​​ ನಿಂದ ಮತ್ತೊಂದು ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಅಧ್ಯಕ್ಷ‌ ಡೊನಾಲ್ಡ್​ ಟ್ರಂಪ್​​ಗೆ ಯುಟ್ಯೂಬ್​​ ನಿಂದ ಮತ್ತೊಂದು ಶಾಕ್

ಡೊನಾಲ್ಡ್​​ ಟ್ರಂಪ್​ರ ಯುಟ್ಯೂಬ್​ ಖಾತೆಯ ಮೇಲೆ ಹೇರಲಾಗಿದ್ದ ನಿರ್ಬಂಧದ ಅವಧಿಯನ್ನ ಕನಿಷ್ಟ ಎಂದರೆ ಮುಂದಿನ ವಾರದವರೆಗೂ ವಿಸ್ತರಿಸೋದಾಗಿ ಗೂಗಲ್​ ಒಡೆತನದ ಯುಟ್ಯೂಬ್​ ಸಂಸ್ಥೆ ಹೇಳಿದೆ. ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​ ಯುಟ್ಯೂಬ್​​ನಲ್ಲಿ 2.79 ಮಿಲಿಯನ್​​ ಚಂದಾದಾರರನ್ನ ಹೊಂದಿದ್ದಾರೆ.

ಜೋ ಬಿಡೆನ್​ ಹಾಗೂ ಕಮಲಾ ಹ್ಯಾರಿಸ್​​ರ ಪದಗ್ರಹಣ ದಿನದಂದೇ ಇನ್ನೊಂದು ವಾರಗಳವರೆಗೆ ಟ್ರಂಪ್​ ಯುಟ್ಯೂಬ್​ ಚಾನೆಲ್​ ನಿರ್ಬಂಧ ಮುಂದುವರಿಯಲಿದೆ ಎಂಬ ವಿಚಾರವನ್ನ ಯುಟ್ಯೂಬ್​ ಹೊರಹಾಕಿದೆ.

ಕಳೆದ ವಾರ ಪ್ರಚೋದನಾತ್ಮಕ ವಿಡಿಯೋಗಳನ್ನ ಹಾಕಿದ ಹಿನ್ನೆಲೆ ಯುಟ್ಯೂಬ್​ ಟ್ರಂಪ್​ ಖಾತೆಯಿಂದ ಹೊಸ ವಿಡಿಯೋಗಳನ್ನ ಅಳಿಸಿ ಹಾಕಿತ್ತು. ಅಲ್ಲದೇ ಒಂದು ವಾರಗಳ ಕಾಲ ಹೊಸ ವಿಡಿಯೋ ಅಪ್​ಲೋಡ್​ ಮಾಡದಂತೆ ನಿರ್ಬಂಧವನ್ನೂ ಹೇರಿತ್ತು. ಇದೀಗ ಈ ನಿರ್ಬಂಧದ ಅವಧಿಯನ್ ಯುಟ್ಯೂಬ್​ ಇನ್ನೂ ಒಂದು ವಾರಗಳ ಕಾಲ ವಿಸ್ತರಿಸಿದೆ. ಹಿಂದಿನ ಆದೇಶದ ಪ್ರಕಾರ ಡೊನಾಲ್ಡ್​ ಟ್ರಂಪ್​​ರ ಯುಟ್ಯೂಬ್​ ನಿರ್ಬಂಧದ ಅವಧಿ ಮಂಗಳವಾರಕ್ಕೆ ಕೊನೆಯಾಗಬೇಕಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...