ಡೊನಾಲ್ಡ್ ಟ್ರಂಪ್ರ ಯುಟ್ಯೂಬ್ ಖಾತೆಯ ಮೇಲೆ ಹೇರಲಾಗಿದ್ದ ನಿರ್ಬಂಧದ ಅವಧಿಯನ್ನ ಕನಿಷ್ಟ ಎಂದರೆ ಮುಂದಿನ ವಾರದವರೆಗೂ ವಿಸ್ತರಿಸೋದಾಗಿ ಗೂಗಲ್ ಒಡೆತನದ ಯುಟ್ಯೂಬ್ ಸಂಸ್ಥೆ ಹೇಳಿದೆ. ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಟ್ಯೂಬ್ನಲ್ಲಿ 2.79 ಮಿಲಿಯನ್ ಚಂದಾದಾರರನ್ನ ಹೊಂದಿದ್ದಾರೆ.
ಜೋ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ರ ಪದಗ್ರಹಣ ದಿನದಂದೇ ಇನ್ನೊಂದು ವಾರಗಳವರೆಗೆ ಟ್ರಂಪ್ ಯುಟ್ಯೂಬ್ ಚಾನೆಲ್ ನಿರ್ಬಂಧ ಮುಂದುವರಿಯಲಿದೆ ಎಂಬ ವಿಚಾರವನ್ನ ಯುಟ್ಯೂಬ್ ಹೊರಹಾಕಿದೆ.
ಕಳೆದ ವಾರ ಪ್ರಚೋದನಾತ್ಮಕ ವಿಡಿಯೋಗಳನ್ನ ಹಾಕಿದ ಹಿನ್ನೆಲೆ ಯುಟ್ಯೂಬ್ ಟ್ರಂಪ್ ಖಾತೆಯಿಂದ ಹೊಸ ವಿಡಿಯೋಗಳನ್ನ ಅಳಿಸಿ ಹಾಕಿತ್ತು. ಅಲ್ಲದೇ ಒಂದು ವಾರಗಳ ಕಾಲ ಹೊಸ ವಿಡಿಯೋ ಅಪ್ಲೋಡ್ ಮಾಡದಂತೆ ನಿರ್ಬಂಧವನ್ನೂ ಹೇರಿತ್ತು. ಇದೀಗ ಈ ನಿರ್ಬಂಧದ ಅವಧಿಯನ್ ಯುಟ್ಯೂಬ್ ಇನ್ನೂ ಒಂದು ವಾರಗಳ ಕಾಲ ವಿಸ್ತರಿಸಿದೆ. ಹಿಂದಿನ ಆದೇಶದ ಪ್ರಕಾರ ಡೊನಾಲ್ಡ್ ಟ್ರಂಪ್ರ ಯುಟ್ಯೂಬ್ ನಿರ್ಬಂಧದ ಅವಧಿ ಮಂಗಳವಾರಕ್ಕೆ ಕೊನೆಯಾಗಬೇಕಿತ್ತು.