alex Certify ಯುಟ್ಯೂಬ್​​ ನಲ್ಲಿ ಅಮೆರಿಕನ್ ಗಾಯಕಿಯಿಂದ ಅಪರೂಪದ ವಿಶಿಷ್ಟ ಸಾಧನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಟ್ಯೂಬ್​​ ನಲ್ಲಿ ಅಮೆರಿಕನ್ ಗಾಯಕಿಯಿಂದ ಅಪರೂಪದ ವಿಶಿಷ್ಟ ಸಾಧನೆ

ತಮ್ಮ ಪಾಪ್​ ಸಾಂಗ್​​ಗಳ ಮೂಲಕವೇ ಬಹಳ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಪ್ರಶಸ್ತಿಗಳನ್ನ ಬಾಚಿಕೊಂಡಿರುವ ಅಮೆರಿಕದ ಗಾಯಕಿ ಹಾಗೂ ಕವನ ಬರಹಗಾರ್ತಿ ಬಿಲ್ಲಿ ಎಲಿಶ್​​ಗೆ ಯುಟ್ಯೂಬ್​​ ಮತ್ತೊಂದು ಕೀರ್ತಿಯನ್ನ ತಂದುಕೊಟ್ಟಿದೆ.

ಬೆಲ್ಲಿ ಎಲ್ಲಿಶ್​ರ ಪ್ರಸಿದ್ಧ ಪಾಪ್​ ಸಂಗೀತದಲ್ಲೊಂದಾದ ಬ್ಯಾಡ್​ ಗಯ್​ ಎಂಬ ಹಾಡನ್ನ ನೀವು ಕೇಳಿರ್ತಿರಾ. ಯುಟ್ಯೂಬ್ನಲ್ಲಿಲಿ ಬಿಲಿಯನ್​ಗಟ್ಟಲೇ ವೀವ್ಸ್ ಹಾಗೂ ಲೈಕ್ಸ್ ಪಡೆದಿರುವ ಬಿಲ್ಲಿ ಎಲಿಶ್​ರ ಈ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್​ ಮಾಡಿತ್ತು.

ಎಷ್ಟರ ಮಟ್ಟಿಗೆ ಈ ಹಾಡು ಫೇಮಸ್​ ಆಗಿತ್ತು ಅಂದರೆ ಈ ಹಾಡಿನ ಟ್ಯೂನ್​ ಬಳಸಿಕೊಂಡು ಅನೇಕರು ಅವರದ್ದೇ ಶೈಲಿಯಲ್ಲಿ ಪ್ರತಿಭೆ ಪ್ರದರ್ಶಿಸಿದ್ದರು. ಕೆಲವರು ಸಂಗೀತ ಸಾಧನಗಳ ಮೂಲಕ ಹಾಡಿನ ಟ್ಯೂನ್​ ಕೇಳಿಸಿದ್ರೆ….‌‌ಇನ್ನು ಕೆಲವರು ಬೆಲ್ಲಿ ಎಲಿಶ್​ರಂತೆ ಹಾಡಲು ಯತ್ನಿಸಿದ್ದರು. ನೃತ್ಯಪಟುಗಳ ಈ ಹಾಡಿಗೆ ಹೆಜ್ಜೆ ಹಾಕಿದ್ದು ಇವೆಲ್ಲ ವಿಡಿಯೋಗಳು ಯುಟ್ಯೂಬ್​ನಲ್ಲಿ ಹರಿದಾಡುತ್ತಿದೆ.

ಬ್ಯಾಡ್​ ಗೈನ ಜನಪ್ರಿಯತೆ ಕಂಡ ಯು ಟ್ಯೂಬ್​ ಹಾಗೂ ಗೂಗಲ್​ ಕ್ರಿಯೆಟಿವ್​ ಲ್ಯಾಬ್​ ಸಾಮಾನ್ಯ ಜನತೆ ಮಾಡಿದ ಬ್ಯಾಡ್​ ಗೈ ಸಂಗೀತ, ನೃತ್ಯ, ಗಾಯನ ಎಲ್ಲವನ್ನ ಬಳಸಿಕೊಂಡು ಇನ್ಫನೈಟ್​ ಬ್ಯಾಡ್​ ಗೈ ಎಂಬ ವಿಡಿಯೋ ಅಪ್​ಲೋಡ್​ ಮಾಡಿದೆ.

ಅಲ್ಲದೇ ಇದನ್ನ ವಿಶ್ವದ ಮೊದಲ ಅನಂತ ಸಂಗೀತದ ವಿಡಿಯೋ ಎಂದೂ ಬಣ್ಣಿಸಲಾಗಿದೆ. ಸಾಮಾನ್ಯ ಜನತೆ ಮಾಡಿದ ಪ್ರಯತ್ನಗಳ ಸಣ್ಣ ಕ್ಲಿಪ್​ ಬಳಸಿ ಈ ವಿಡಿಯೋವನ್ನ ತಯಾರಿಸಲಾಗಿದೆ. ಯು ಟ್ಯೂಬ್​ನಲ್ಲಿ ಇನ್ಫೈನೈಟ್​ ಬ್ಯಾಡ್​ ಗೈ ಎಂದು ಸರ್ಚ್ ಕೊಟ್ಟರೆ ಯುಟ್ಯೂಬ್​ ತಯಾರಿಸಿರುವ ವಿಡಿಯೋ ನಿಮಗೆ ಕಾಣಸಿಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...