alex Certify ನನ್ನೆಲ್ಲಾ ಸಾಧನೆಗೆ ತಾಯಿ ಆದರ್ಶವೇ ಸ್ಪೂರ್ತಿ ಎಂದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನೆಲ್ಲಾ ಸಾಧನೆಗೆ ತಾಯಿ ಆದರ್ಶವೇ ಸ್ಪೂರ್ತಿ ಎಂದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​

ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಇತಿಹಾಸವನ್ನ ರಚಿಸಿದ್ದಾರೆ. ತಮ್ಮ ಈ ಸಾಧನೆಗೆ ತಾಯಿಯೇ ಸ್ಪೂರ್ತಿ ಎಂದಿರುವ ಕಮಲಾ ಹ್ಯಾರಿಸ್​, ನಮ್ಮ ತಾಯಿ ಎಂದಿಗೂ ಹೇಳುತ್ತಿದ್ದುದು ಒಂದೇ ಮಾತು : ನಾವು ಮೊದಲನೇ ಸ್ಥಾನಕ್ಕೆ ಏರಬಹುದು. ಆದರೆ ಎಂದಿಗೂ ಕೊನೆಯ ಸ್ಥಾನದಲ್ಲಿ ನಿಲ್ಲದಂತೆ ನೋಡಿಕೊಳ್ಳಿ ಅಂತಾ ಹೇಳಿದ್ದರು ಎಂದಿದ್ದಾರೆ.

ವಿಧಿವಶರಾದ ತಮ್ಮ ತಾಯಿ ಶ್ಯಾಮಲಾ ಗೋಪಾಲನ್​ರನ್ನ ನೆನೆದ ಕಮಲಾ ಹ್ಯಾರಿಸ್​, ನನ್ನ ಜೀವನದ ಉದ್ದಕ್ಕೂ ನನ್ನ ತಾಯಿ ಕಲಿಸಿದ ಆದರ್ಶಗಳನ್ನೇ ಇಟ್ಟುಕೊಂಡು ಬಂದಿದ್ದೇನೆ. ಅಮೆರಿಕದ ಮೊದಲ ಮಹಿಳಾ ಡಿಸ್ಟ್ರಿಕ್ಟ್​ ಅಟಾರ್ನಿಯಿಂದ ಹಿಡಿದು ಕ್ಯಾಲಿಫೋರ್ನಿಯಾದ ಮೊದಲ ಮಹಿಳಾ ಅಟರ್ನಿ ಜನರಲ್ ​ಆಗುವಲ್ಲಿಯೂ ನನಗೆ ತಾಯಿಯ ಆದರ್ಶಗಳೇ ಸ್ಪೂರ್ತಿಯಾಗಿದ್ದವು ಎಂದು ಹೇಳಿದ್ದಾರೆ.

56 ವರ್ಷದ ಕಮಲಾ ಹ್ಯಾರಿಸ್​​ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲದೇ ಅಮೆರಿಕ ಅಧ್ಯಕ್ಷೆಯಾದ ಮೊದಲ ದಕ್ಷಿಣ ಏಷಿಯಾ ಮೂಲದ ಕಪ್ಪು ಮಹಿಳೆ ಎಂಬ ಸಾಧನೆಯನ್ನೂ ಮಾಡಿದ್ದಾರೆ.

ನನ್ನ ಕತೆ ಅಮೆರಿಕದ ಅದೆಷ್ಟೋ ಮಿಲಿಯನ್​​ಗಟ್ಟಲೇ ಜನರ ಕತೆಯಂತೆಯೇ ಇದೆ. ನನ್ನ ತಾಯಿ ಶ್ಯಾಮಲಾ ಗೋಪಾಲನ್​​ ಭಾರತ ಮೂಲದವರು. ನಾನು ಹಾಗೂ ನನ್ನ ಸಹೋದರಿಗೆ ಮಾಯಾಗೆ ನಮ್ಮ ತಾಯಿ ಕೊನೆಯ ಸ್ಥಾನದಲ್ಲಿ ನಿಲ್ಲೋದನ್ನ ಕಲಿಸಿಯೇ ಇಲ್ಲ ಎಂದು ನೆನೆದ್ರು. ಅಮೆರಿಕ ಉಪಾಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಟ್ವಿಟರ್​​ನಲ್ಲಿ ವಿಡಿಯೋ ಶೇರ್​ ಮಾಡಿದ್ದ ಹ್ಯಾರಿಸ್​ ಈ ಎಲ್ಲಾ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...