alex Certify ಅತಿ ಚಿಕ್ಕ ವಯಸ್ಸಲ್ಲೇ ಸಮುದ್ರ ಯಾನ ಪೂರೈಸಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿ ಚಿಕ್ಕ ವಯಸ್ಸಲ್ಲೇ ಸಮುದ್ರ ಯಾನ ಪೂರೈಸಿದ ಯುವತಿ

ಜಾಸ್ಮಿನ್​​ ಹ್ಯಾರಿಸನ್​​ ಎಂಬಾಕೆ ಅತಿ ಚಿಕ್ಕ ವಯಸ್ಸಿನಲ್ಲಿ ಅಟ್ಲಾಂಟಿಕ್​ ಸಮುದ್ರದಲ್ಲಿ ಏಕಾಂಗಿ ಯಾನ ಕೈಗೊಳ್ಳುವ ಮೂಲಕ ಸಾಧನೆ ಮಾಡಿದ್ದಾಳೆ. 21 ವರ್ಷ ವಯಸ್ಸಿನಲ್ಲೇ ಈ ಈಜುಪಟು ಅಟ್ಲಾಂಟಿಕ್​ ಸಾಗರವನ್ನ ಪರ್ಯಟನೆ ಮಾಡಿದ್ದಾಳೆ.

ಈ ಏಕಾಂಗಿ ಯಾನ ಪೂರ್ಣಗೊಳಿಸಲು ಜಾಸ್ಮಿನ್​ 70 ದಿನಗಳನ್ನ ತೆಗೆದುಕೊಂಡಿದ್ದಾಳೆ. 2 ಗಂಟೆಗಳ ಕಾಲ ಸಾಗರ ಸುತ್ತಿ ಇನ್ನೆರಡು ಗಂಟೆ ನಿದ್ದೆ ಮಾಡುವ ಮೂಲಕ ಈಕೆ ಸಮುದ್ರ ಯಾನ ಮಾಡಿದ್ದಾಳೆ.

ಈ ಸಮಯದಲ್ಲಿ ಈಕೆ ಎಲ್ಲರೊಂದಿಗೂ ಸಂಪರ್ಕವನ್ನ ಕಡಿದುಕೊಂಡಿದ್ದಳು. ಸ್ಯಾಟ್​ಲೈಟ್​ ಫೋನ್​ ಮೂಲಕ ತಾಯಿಗೆ ನಿತ್ಯ ಕರೆ ಮಾಡುತ್ತಿದ್ದಳು ಎನ್ನಲಾಗಿದೆ.

70 ದಿನಗಳ ಅವಧಿಯಲ್ಲಿ ಜಾಸ್ಮಿನ್​​ ಬರೋಬ್ಬರಿ 3000 ಮೈಲಿ ಕ್ರಮಿಸಿದ್ದಾಳೆ. ಸಾಮಾನ್ಯವಾಗಿ ಇಂತಹ ಪ್ರಯಾಣದ ವೇಳೆ ದಿನಸಿ ಸಾಮಗ್ರಿಗಳನ್ನ ಕೊಂಡೊಯ್ತಾರೆ. ಆದರೆ ಈಕೆ ಮಾತ್ರ ತನ್ನ ಜರ್ನಿ ಮುಗಿಯೋದ್ರೊಳಗೆ 40 ಕೆಜಿ ಚಾಕಲೇಟ್​ ಹಾಗೂ ಬಿಸ್ಕಟ್​ಗಳನ್ನ ತಿಂದು ಮುಗಿಸಿದ್ದಾಳಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...