ಒಬಾಮಾ ದಂಪತಿಯನ್ನು ನಕಲು ಮಾಡಿದ ಪುಟಾಣಿ ಮಕ್ಕಳು 02-02-2021 1:51PM IST / No Comments / Posted In: Latest News, International ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ರ ಪದಗ್ರಹಣ ಕಾರ್ಯಕ್ರಮದ ವೇಳೆ ಬರಾಕ್ ಒಬಾಮಾ ಹಾಗೂ ಮಿಶೆಲ್ ಒಬಾಮಾ ಧರಿಸಿದ್ದ ಉಡುಗೆ ಹೇಗಿತ್ತು ಅನ್ನೋದು ನಿಮಗೆ ನೆನಪಿರಬಹುದು. ಬರಾಕ್ ಒಬಾಮಾ ಕಪ್ಪು ಬಣ್ಣದ ಲಾಂಗ್ ಸೂಟ್ ಧರಿಸಿದ್ದರೆ ಮಿಶೆಲ್ ಒಬಾಮಾ ನೇರಳೆ ಶೇಡ್ನ ಲಾಂಗ್ ಸೂಟ್ ಧರಿಸಿದ್ದರು. ಈ ಜೋಡಿಯ ಉಡುಗೆ ಸಾಕಷ್ಟು ವಿಚಾರಗಳಿಂದ ಸುದ್ದಿಯಾಗಿತ್ತು. ಆದರೆ ಈಗ ಇದೇ ತರಹನಾದ ಉಡುಪನ್ನ ಇಬ್ಬರು ಮುದ್ದಾದ ಮಕ್ಕಳು ಧರಿಸಿದ್ದು ಮಿಶೆಲ್ ಹಾಗೂ ಬರಾಕ್ ಒಬಾಮಾರಂತೆಯೇ ಕ್ಯಾಮರಾ ಕಣ್ಣಿಗೆ ಪೋಸ್ ನೋಡಿದ್ದಾರೆ. ಈ ಮಕ್ಕಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡಿದೆ ಅಂದ್ರೆ ಸ್ವತಃ ಮಿಶೆಲ್ ಒಬಾಮಾ ಮುದ್ದಾದ ಮಕ್ಕಳ ಫೋಟೋವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಂನ ಮಕ್ಕಳ 5 ಫೋಟೋಗಳನ್ನ ಶೇರ್ ಮಾಡಿದ ಮಿಶೆಲ್ ಒಬಾಮಾ, ರೈಲೇಗ್ ಹಾಗೂ ಜಾಯ್ಡನ್ ನೀವಿಬ್ಬರು ಸರಿಯಾಗಿ ರೆಡಿಯಾಗಿದ್ದೀರಾ ಎಂದು ಹೊಗಳಿದ್ದಾರೆ. https://www.instagram.com/p/CKwX2xELwmn/?utm_source=ig_web_copy_link