alex Certify “ನೀನು ಅಮೆರಿಕಾ ಪ್ರೆಸಿಡೆಂಟ್ ಆಗಬಹುದು” ಎಂದು ಕಮಲಾ ಹ್ಯಾರಿಸ್ ಹೇಳಿದ್ಯಾರಿಗೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

“ನೀನು ಅಮೆರಿಕಾ ಪ್ರೆಸಿಡೆಂಟ್ ಆಗಬಹುದು” ಎಂದು ಕಮಲಾ ಹ್ಯಾರಿಸ್ ಹೇಳಿದ್ಯಾರಿಗೆ…?

ವಾಷಿಂಗ್ಟನ್: ಅಮೆರಿಕಾ ಉಪಾಧ್ಯಕ್ಷ ಸ್ಥಾನಾಂಕಾಂಕ್ಷಿ ಭಾರತೀಯ ಸಂಜಾತೆ ಕಮಲಾ ಹ್ಯಾರಿಸ್ ಈಗ ಎಲ್ಲೆಡೆ ಚರ್ಚೆಯಲ್ಲಿದ್ದಾರೆ. ಅವರು ತಮ್ಮ ಮೊಮ್ಮಗಳ ಜತೆ ಮಾಡಿದ ಸಂಭಾಷಣೆ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ತಮ್ಮ ಸಹೋದರಿಯ ಪುತ್ರಿ ಮೀನಾ ಹ್ಯಾರಿಸ್ ಅವರ ಪುಟ್ಟ ಮಗಳನ್ನು ತೊಡೆಯ ಮೇಲೆ ಕೂಡ್ರಿಸಿಕೊಂಡ ಕಮಲಾ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಮಾತನಾಡಿದ್ದಾರೆ.

“ನೀನೂ ಕೂಡ ಮುಂದೆ ಅಮೆರಿಕಾ ಅಧ್ಯಕ್ಷೆಯಾಗಬಹುದು” ಎಂದಿದ್ದಾರೆ. ಬಾಲಕಿ “ನಾನು ಬಾಹ್ಯಾಕಾಶ ವಿಜ್ಞಾನಿ ಹಾಗೂ ನಂತರ ಅಮೆರಿಕಾ ಅಧ್ಯಕ್ಷೆಯಾಗುತ್ತೇನೆ‌ ಎಂದು ಅಜ್ಜಿಯ ಬಳಿ ಹೇಳಿದ್ದಾಳೆ.

ತಮ್ಮ ಚಿಕ್ಕಮ್ಮ ಹಾಗೂ ತಮ್ಮ ಪುಟ್ಟ ಮಗಳ ನಡುವಿನ ಸಂಭಾಷಣೆಯನ್ನು ಮೀನಾ ಹ್ಯಾರಿಸ್ ವಿಡಿಯೋ ಮಾಡಿ ಟ್ವಿಟರ್ ನಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋವನ್ನು 3.36 ಲಕ್ಷ ಜನ ವೀಕ್ಷಿಸಿದ್ದು, 36 ಸಾವಿರ ಜನ ಲೈಕ್ ಮಾಡಿದ್ದಾರೆ. 3400 ಜನ ರಿ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...