ಸ್ನೇಹಿತೆಯ ಮದುವೆಯಲ್ಲಿ ಸಖತ್ ಆಗಿ ರೆಡಿಯಾಗಬೇಕು ಅನ್ನೋ ಆಸೆ ಬಹುತೇಕ ಎಲ್ಲಾ ಯುವತಿಯರಿಗೂ ಇರುತ್ತೆ. ಆದರೆ ನಿಮ್ಮ ಆ ಸ್ನೇಹಿತೆಯೇ ನನ್ನ ಮದುವೆಯಲ್ಲಿ ನೀನು ಸುಂದರವಾಗಿ ಕಾಣಿಸಬಾರದು ಎಂದು ಹೇಳಿಬಿಟ್ರೆ..? ಎಷ್ಟು ಕಷ್ಟ ಅಲ್ವಾ..? ಆದರೆ ಇಂತಹದ್ದೊಂದು ಸಂಕಷ್ಟಕ್ಕೆ ಇಲ್ಲೊಬ್ಬ ಯುವತಿ ಸಿಲುಕಿದ್ದಾಳೆ.
ಸೋಶಿಯಲ್ ಮೀಡಿಯಾದಲ್ಲಿ ಈ ಕತೆಯನ್ನ ಹಂಚಿಕೊಂಡಿರುವ ಯುವತಿ, ತನ್ನ ಸ್ನೇಹಿತೆ ನನ್ನ ಬಳಿ ನೀನು ಮೇಕಪ್ ಧರಿಸೋದೇ ಹೌದಾದಲ್ಲಿ ನನ್ನ ಮದುವೆಗೆ ಬರಬೇಡ ಎಂದು ಹೇಳಿದ್ದಳಂತೆ.
ನೀನು ಮೇಕಪ್ ಹಾಕುವಂತಿಲ್ಲ. ನನ್ನ ವಿಶೇಷ ದಿನದಲ್ಲಿ ನೀನು ನನಗಿಂತ ಸುಂದರವಾಗಿ ಕಾಣಬಾರದು. ಎಂದು ಈ ಪೋಸ್ಟ್ಗೆ ಶೀರ್ಷಿಕೆ ನೀಡಲಾಗಿದೆ.
ನಾನೊಬ್ಬ ಮೇಕಪ್ ಆರ್ಟಿಸ್ಟ್. ನಾನು ನಿತ್ಯವೂ ಮೇಕಪ್ ಧರಿಸುತ್ತೇನೆ. ಮೇಕಪ್ ಮಾಡೋದು ನನಗೆ ಕರಗತವಾಗಿದೆ. ನನ್ನ ಹಾಗೂ ನನ್ನ ಸ್ನೇಹಿತೆಯ ಅಭಿಪ್ರಾಯದಂತೆ ನಾನು ಮೇಕಪ್ ಹಾಕಿದಾಗ ಇನ್ನೂ ಸುಂದರವಾಗಿ ಕಾಣುತ್ತೇನೆ. ಮೇಕಪ್ ಇದ್ದರೆ ನನ್ನ ಆತ್ಮವಿಶ್ವಾಸ ಹೆಚ್ಚಿದಂತೆ ನನಗೆ ಭಾಸವಾಗುತ್ತೆ.
ಹುಡುಗರು ನನ್ನ ಸೌಂದರ್ಯಕ್ಕೆ ಮಾರು ಹೋದಾಗಲೆಲ್ಲ ನನ್ನ ಸ್ನೇಹಿತೆ ಆಕೆಯನ್ನ ಮೇಕಪ್ ಇಲ್ಲದೇ ನೋಡಿ ಎಂದು ಹೇಳುತ್ತಿದ್ದಳು. ನನ್ನ ಮೇಕಪ್ ಬಗ್ಗೆ ಹೊಟ್ಟೆಕಿಚ್ಚನ್ನ ಹೊಂದಿದ್ದ ಆಕೆ ಇದೀಗ ನನ್ನ ಮದುವೆಗೆ ನೀನು ಮೇಕಪ್ ಧರಿಸಿ ಬರುವಂತಿಲ್ಲ ಎಂದು ಷರತ್ತನ್ನ ವಿಧಿಸಿದ್ದಾಳೆ. ಈ ಮದುವೆಗೆ ನಾನು ಹೋಗಬೇಕೆ..? ಎಂಬ ಪ್ರಶ್ನೆಯನ್ನ ನೆಟ್ಟಿಗರ ಮುಂದೆ ಇರಿಸಿದ್ದಾರೆ.
ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೇ ನೆಟ್ಟಿಗರು ನಿಮ್ಮ ಮೇಲೆ ಅಸೂಯೆಯನ್ನ ಹೊಂದಿರುವ ಈಕೆ ನಿಮ್ಮ ನಿಜವಾದ ಗೆಳತಿ ಆಗಿರೋಕೆ ಸಾಧ್ಯವೇ ಇಲ್ಲ ಎಂದು ಜರಿದಿದಿದ್ದಾರೆ.