alex Certify ಗುರಿ ತಲುಪಲು ಅಡ್ಡಿಯಾಗಲಿಲ್ಲ ಕಾಲಿಲ್ಲವೆಂಬ ನ್ಯೂನ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುರಿ ತಲುಪಲು ಅಡ್ಡಿಯಾಗಲಿಲ್ಲ ಕಾಲಿಲ್ಲವೆಂಬ ನ್ಯೂನ್ಯತೆ

ಸಾಧಿಸಬೇಕೆಂದು ಛಲ ಉಳ್ಳವರಿಗೆ ಯಾವುದೇ ಸವಾಲುಗಳನ್ನ ಮೆಟ್ಟಿನಿಲ್ಲುವ ತಾಕತ್ತಿರುತ್ತದೆ. ಈ ಮಾತಿಗೆ ಪೂರಕ ಎಂಬಂತೆ ಬಾಲಕಿಯೊಬ್ಬಳು ಒಂದೇ ಕಾಲಿನ ಸಹಾಯದಿಂದ ತಾನೆಂದುಕೊಂಡಿದ್ದ ಗುರಿಯನ್ನ ತಲುಪುವಲ್ಲಿ ಯಶಸ್ವಿಯಾಗಿದ್ದು ಈ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರಿಂದ ಮೆಚ್ಚುಗೆಯನ್ನ ಪಡೆಯುತ್ತಿದ್ದಾಳೆ.

58 ಸೆಕೆಂಡ್​ಗಳ ವಿಡಿಯೋದಲ್ಲಿ ಆಂಟೋನೆಲ್ಲ ಎಂಬ ಹೆಸರಿನ ಬಾಲಕಿ ಎತ್ತರವಾದ ಜಾಗವನ್ನ ಏರಲು ತುಂಬಾನೇ ಕಷ್ಟ ಪಡ್ತಾಳೆ. ಆಕೆಯ ಒಂದು ಕಾಲು ಕೃತಕವಾಗಿದ್ದರಿಂದ ಈ ಸವಾಲನ್ನ ಮೆಟ್ಟಿ ಗುರಿ ತಲುಪೋದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ ತಾಯಿ ನೀಡಿದ ಸ್ಪೂರ್ತಿಯ ಮಾತುಗಳಿಂದ ಪ್ರೇರಣೆ ಪಡೆದ ಬಾಲಕಿ ಒಂದೇ ಕಾಲಿನಿಂದ ಆ ಜಾಗವನ್ನ ಏರುವಲ್ಲಿ ಯಶಸ್ವಿಯಾಗಿದ್ದಾಳೆ.

ಸಾಕಷ್ಟು ಬಾರಿ ತನ್ನ ಪ್ರಯತ್ನದಲ್ಲಿ ವಿಫಲಳಾಗಿದ್ದರೂ ಸಹ ಛಲ ಬಿಡದೇ ಗುರಿ ತಲುಪಿದ ಪುಟ್ಟ ಬಾಲಕಿಗೆ ನೆಟ್ಟಿಗರು ಭೇಷ್​ ಅಂತಿದ್ದಾರೆ.

— GoodNewsCorrespondent (@GoodNewsCorres1) May 26, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...