ಸಾಧಿಸಬೇಕೆಂದು ಛಲ ಉಳ್ಳವರಿಗೆ ಯಾವುದೇ ಸವಾಲುಗಳನ್ನ ಮೆಟ್ಟಿನಿಲ್ಲುವ ತಾಕತ್ತಿರುತ್ತದೆ. ಈ ಮಾತಿಗೆ ಪೂರಕ ಎಂಬಂತೆ ಬಾಲಕಿಯೊಬ್ಬಳು ಒಂದೇ ಕಾಲಿನ ಸಹಾಯದಿಂದ ತಾನೆಂದುಕೊಂಡಿದ್ದ ಗುರಿಯನ್ನ ತಲುಪುವಲ್ಲಿ ಯಶಸ್ವಿಯಾಗಿದ್ದು ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಮೆಚ್ಚುಗೆಯನ್ನ ಪಡೆಯುತ್ತಿದ್ದಾಳೆ.
58 ಸೆಕೆಂಡ್ಗಳ ವಿಡಿಯೋದಲ್ಲಿ ಆಂಟೋನೆಲ್ಲ ಎಂಬ ಹೆಸರಿನ ಬಾಲಕಿ ಎತ್ತರವಾದ ಜಾಗವನ್ನ ಏರಲು ತುಂಬಾನೇ ಕಷ್ಟ ಪಡ್ತಾಳೆ. ಆಕೆಯ ಒಂದು ಕಾಲು ಕೃತಕವಾಗಿದ್ದರಿಂದ ಈ ಸವಾಲನ್ನ ಮೆಟ್ಟಿ ಗುರಿ ತಲುಪೋದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ ತಾಯಿ ನೀಡಿದ ಸ್ಪೂರ್ತಿಯ ಮಾತುಗಳಿಂದ ಪ್ರೇರಣೆ ಪಡೆದ ಬಾಲಕಿ ಒಂದೇ ಕಾಲಿನಿಂದ ಆ ಜಾಗವನ್ನ ಏರುವಲ್ಲಿ ಯಶಸ್ವಿಯಾಗಿದ್ದಾಳೆ.
ಸಾಕಷ್ಟು ಬಾರಿ ತನ್ನ ಪ್ರಯತ್ನದಲ್ಲಿ ವಿಫಲಳಾಗಿದ್ದರೂ ಸಹ ಛಲ ಬಿಡದೇ ಗುರಿ ತಲುಪಿದ ಪುಟ್ಟ ಬಾಲಕಿಗೆ ನೆಟ್ಟಿಗರು ಭೇಷ್ ಅಂತಿದ್ದಾರೆ.
https://twitter.com/i/status/1397399732616630272