ಅಮೆರಿಕದ ನಟ ಜಾಸೋನ್ ಮಾಮೋವಾ ತಮ್ಮ ವರ್ಕೌಟ್ ವಿಚಾರವಾಗಿ ಅಭಿಪ್ರಾಯ ಹೇಳಿದ್ದು ಯೋಗಾಸನ ಅತ್ಯಂತ ಕಷ್ಟದ ಸವಾಲು ಎಂದಿದ್ದಾರೆ.
ಮೆನ್ಸ್ ಹೆಲ್ತ್ ಮ್ಯಾಗ್ಜಿನ್ ಜೊತೆ ಮಾತನಾಡಿದ 41 ವರ್ಷದ ಹಾಲಿವುಡ್ ನಟ, ಯೋಗಾಸನದ ಬಗೆಗಿನ ಅವರ ಅನುಭವವನ್ನ ಹಂಚಿಕೊಂಡಿದ್ದಾರೆ.
ನನ್ನ ಪತ್ನಿ ಲಿಸಾ ಬೊನೆಟ್ ನನಗೆ ಯೋಗ ಮಾಡುವಂತೆ ಪ್ರೇರೇಪಿಸಿದ್ದಳು. ಪತ್ನಿಯ ಮಾತಿನ ಮೇಲೆ ನಾನು ಯೋಗಾಸನ ಮಾಡಿದೆ. ಆದರೆ ನಾನು ಇದುವರೆಗೆ ಮಾಡಿದ ಎಲ್ಲ ಕಸರತ್ತುಗಳಿಗಿಂತ ಕಠಿಣದ್ದದ್ದಾಗಿದೆ ಎಂದಿದ್ದಾರೆ.