ಕೊರೋನಾ ಕಾಲದಲ್ಲೂ ಹೊಸ ಆವಿಷ್ಕಾರಗಳಿಗೇನೂ ಕೊರತೆಯಿಲ್ಲ. ಅದರಲ್ಲೂ ಸ್ಯಾನಿಟೈಸರ್ ಗೆ ಸಂಬಂಧಿಸಿದಂತೆ ಹತ್ತು ಹಲವು ಆವಿಷ್ಕಾರಯುತ ಪರಿಕರಗಳ ಪ್ರಯೋಗವಾಗುತ್ತಿದೆ.
ಜಪಾನ್ ನ ಗ್ರಂಥಾಲಯವೊಂದರಲ್ಲಿ ಬುಕ್ ಸ್ಯಾನಿಟೈಸರ್ ಅಳವಡಿಸಿದ್ದು, ಸಣ್ಣ ಫ್ರಿಡ್ಜ್ ಅಥವಾ ಮೈಕ್ರೋ ಓವನ್ ಮಾದರಿಯಲ್ಲಿ ಇರುವ ಯಂತ್ರದೊಳಗೆ ಪುಸ್ತಕ ಇಟ್ಟು, ಗುಂಡಿ ಒತ್ತಿದರೆ ಸಾಕು. ಇಡೀ ಪುಸ್ತಕದ ಪ್ರತಿ ಹಾಳೆಗೂ ಸೋಂಕು ನಿವಾರಕ ಸಿಂಪಡಣೆ ಆಗುತ್ತದೆ.
ಧೈರ್ಯವಾಗಿ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದಬಹುದು. ಪುಸ್ತಕ ಅಥವಾ ಕಾಗದದಿಂದ ಕೊರೋನಾ ಹರಡಬಹುದು ಎಂಬ ಭೀತಿ ದೂರಾಗುತ್ತದೆ. ನಿರಾಳ ಓದು ನಿಮ್ಮದಾಗುತ್ತದೆ
ಏಷ್ಯನ್ ಸ್ಕಿಲ್ಸ್ ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಟಿಕ್ ಟಾಕ್ ಮೂಲಕ ವಿಡಿಯೋ ಹರಿದಾಡುತ್ತಿದ್ದು, 1.1 ಲಕ್ಷ ಜನರು ವಿಡಿಯೋ ವೀಕ್ಷಿಸಿ, ಹೊಸ ಐಡಿಯಾವನ್ನು ಮೆಚ್ಚಿ ಕೊಂಡಾಡಿದ್ದಾರೆ.