ವಿಶ್ವದ ಎರಡನೇ ಅತಿಹೆಚ್ಚು ವಯಸ್ಸಾದ ವ್ಯಕ್ತಿ ಎಂದು ನಂಬಲಾದ 116 ವರ್ಷದ ಫ್ರೆಂಚ್ ಮಹಿಳೆ ಕೊರೊನಾ ವೈರಸ್ನಿಂದ ಗುಣಮುಖರಾಗಿದ್ದಾರೆ. ಹಾಗೂ ಗುರುವಾರ ನಡೆಯಲಿರುವ ತಮ್ಮ 116ನೇ ವರ್ಷದ ಜನ್ಮದಿನಾಚರಣೆ ಆಚರಿಸಲು ಸಿದ್ಧರಾಗ್ತಿದ್ದಾರೆ.
110 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರನ್ನ ಮೌಲ್ಯಮಾಪನ ಮಾಡು ಜೆರೊಂಟಾಲಜಿ ರಿಸರ್ಚ್ ಗ್ರೂಪ್ ಫ್ರೆಂಚ್ ಮಹಿಳೆ ಲೂಸಿನ್ ರಾಂಡನ್ರನ್ನ ಪ್ರಪಂಚದ ಎರಡನೇ ಅತಿ ಹೆಚ್ಚು ಹಿರಿಯ ವ್ಯಕ್ತಿ ಎಂದು ಗುರುತಿಸಿದೆ.
ದಕ್ಷಿಣ ಫ್ರೆಂಚ್ ನಗರದ ಟೌಲನ್ನಲ್ಲಿ ಜನವರಿ ತಿಂಗಳಲ್ಲಿ ಲೂಸಿನ್ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಮೂರು ವಾರಗಳ ಅಂತರದಲ್ಲಿ ಲೂಸಿನ್ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.