alex Certify ಅಪರೂಪದ ಬಣ್ಣದ ಜಿರಾಫೆ ರಕ್ಷಣೆಗೆ ಜಿಪಿಎಸ್ ಸಾಧನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಬಣ್ಣದ ಜಿರಾಫೆ ರಕ್ಷಣೆಗೆ ಜಿಪಿಎಸ್ ಸಾಧನ..!

ಬೇಟೆಗಾರರಿಂದ ರಕ್ಷಿಸುವ ಕಾರಣಕ್ಕಾಗಿ ಕೀನ್ಯಾದಲ್ಲಿರುವ ವಿಶ್ವದ ಏಕೈಕ ಬಿಳಿ ಜಿರಾಫೆಗೆ ಜಿಪಿಎಸ್​ ಟ್ರ್ಯಾಕಿಂಗ್​​ ಸಾಧನವನ್ನ ಅಳವಡಿಸಲಾಗಿದೆ.

ಮಾರ್ಚ್​ನಲ್ಲಿ ಹೆಣ್ಣು ಜಿರಾಫೆ ಹಾಗೂ ಆಕೆಯ ಕರುವನ್ನ ಬೇಟೆಗಾರರು ಕೊಂದ ನಂತರ ಈ ಗಂಡು ಜಿರಾಫೆ ಇದೀಗ ಏಕಾಂಗಿಯಾಗಿದೆ. ಹೀಗಾಗಿ ಈ ಜಿರಾಫೆಯನ್ನ ರಕ್ಷಿಸುವ ಸಲುವಾಗಿ ಜಿಪಿಎಸ್​ ಸಾಧನ ಅಳವಡಿಸಲಾಗಿದೆ.

ಪೂರ್ವ ಕೀನ್ಯಾದ ಗರಿಸ್ಸಾ ಕೌಂಟಿಯಲ್ಲಿರುವ ಕನ್​ರ್ವೆನ್ಸಿಯಲ್ಲಿ ಜಿರಾಫೆಯ ಚಲನವಲನಗಳನ್ನ ವೀಕ್ಷಿಸಲಾಗುತ್ತೆ.  ವಿಶ್ವದ ಏಕೈಕ ಬಿಳಿ ಜಿರಾಫೆ ಗರಿಸ್ಸಾ ಕೌಂಟಿಯ ಇಶಾಕ್ಬಿನಿ ಸಮುದಾಯದಲ್ಲಿ ವಾಸಿಸುತ್ತಿದೆ. ಗಂಡು ಜಿರಾಫೆ ಲ್ಯೂಸಿಸಮ್​ ಎಂಬ ಅಪರೂಪದ ಅನುವಂಶಿಕ ಗುಣಲಕ್ಷಣ ಹೊಂದಿದೆ. ಇದರಿಂದ ಜಿರಾಫೆಯ ಬಣ್ಣ ಮಂದವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...