alex Certify ವಿಶ್ವದ ಹಿರಿಯಜ್ಜ ಎಂಬ ಹೆಗ್ಗಳಿಕೆ ಹೊಂದಿದ್ದ ಬಾಬ್ ವೇಯ್ಟನ್ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಹಿರಿಯಜ್ಜ ಎಂಬ ಹೆಗ್ಗಳಿಕೆ ಹೊಂದಿದ್ದ ಬಾಬ್ ವೇಯ್ಟನ್ ಇನ್ನಿಲ್ಲ

World's oldest man Bob Weighton dies aged 112 | Guinness World Records

ವಿಶ್ವದಲ್ಲಿ ಅಧಿಕೃತವಾಗಿ ಹಿರಿಯ ವ್ಯಕ್ತಿ ಎಂದು ಗುರುತಿಸಲ್ಪಟ್ಟಿದ್ದ ಬಾಬ್ ವೇಯ್ಟನ್ ತಮ್ಮ 112 ನೇ ವರ್ಷ ವಯಸ್ಸಲ್ಲಿ ಇಂಗ್ಲೆಂಡ್ ನಲ್ಲಿ ನಿಧನರಾಗಿದ್ದಾರೆ.

ಗಿನ್ನೆಸ್ ದಾಖಲೆಗಳ ಪ್ರಕಾರ ಬ್ರಿಟನ್ ನಲ್ಲಿ ನೆಲೆಸಿದ್ದ ಬಾಬ್ ವೇಯ್ಟನ್ 112 ವರ್ಷದವರಾಗಿದ್ದು ಅವರು ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. ಹ್ಯಾಂಪ್ ಶೈರ್ ಸೆಂಟ್ರಲ್ ಇಂಗ್ಲಿಷ್ ಕೌಂಟಿ ಮಾಜಿ ಶಿಕ್ಷಕ ಮತ್ತು ಇಂಜಿನಿಯರ್ ಆಗಿರುವ ಬಾಬ್ ವೇಯ್ಟನ್ ಮನೆಯಲ್ಲಿ ಮಲಗಿದ್ದ ವೇಳೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಜಪಾನ್ ದೇಶದ ಚಿಟೆಟ್ಸ್ಉ ವಟನಾಬೆ ನಿಧನದ ನಂತರ ಫೆಬ್ರವರಿಯಲ್ಲಿ ಬಾಬ್ ವೇಯ್ಟನ್ ಅವರನ್ನು ಈ ವಿಶ್ವದ ಹಿರಿಯ ವ್ಯಕ್ತಿ ಎಂದು ಗುರುತಿಸಿ ಗಿನ್ನಿಸ್ ದಾಖಲೆಗೆ ಸೇರಿಸಲಾಗಿತ್ತು. 1908 ಮಾರ್ಚ್ 29 ರಂದು ಉತ್ತರ ಇಂಗ್ಲೆಂಡ್ ಯಾರ್ಕ್ ಶೈರ್ ನಲ್ಲಿ ಜನಿಸಿದ ಅವರು ಮೂವರು ಮಕ್ಕಳು, 10 ಮೊಮ್ಮಕ್ಕಳು, 25 ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ. ದಕ್ಷಿಣ ಆಫ್ರಿಕಾದ ಫ್ರೆಡಿ ಬ್ಲಾಮ್ ಕಳೆದ ತಿಂಗಳು 116ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವುದಾಗಿ ಹೇಳಿದ್ದಾರೆ. ಆದರೆ ಅಧಿಕೃತ ದಾಖಲೆಗಳಲ್ಲಿ ಅವರ ಹೆಸರಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...