alex Certify ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತದಿಂದ ಪಾರಾದ ಮಹಿಳೆಯರು….! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತದಿಂದ ಪಾರಾದ ಮಹಿಳೆಯರು….! ವಿಡಿಯೋ ವೈರಲ್​

ಮಹಿಳೆಯರಿಬ್ಬರು ಕಟ್ಟಡವೊಂದಕ್ಕೆ ಎಂಟ್ರಿ ಕೊಡುತ್ತಿದ್ದ ವೇಳೆ ಬಾಲ್ಕನಿ ಬಳಿ ಶೀಟ್​ ಕುಸಿದಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಷ್ಯಾದಲ್ಲಿ ನಡೆದ ಈ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಮಹಿಳೆಯರಿಬ್ಬರು ಕಟ್ಟಡದ ಎದುರು ನಡೆದುಕೊಂಡು ಹೋಗುತ್ತಿರುತ್ತಾರೆ. ಇನ್ನೇನು ಬಾಗಿಲ ಬಳಿ ಬರಬೇಕು ಅನ್ನುವಷ್ಟರಲ್ಲಿ ಮೇಲಿನಿಂದ ಶೀಟ್​ವೊಂದು ಕುಸಿದು ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಮಹಿಳೆಯರಿಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಇದರಲ್ಲಿ ಓರ್ವ ಮಹಿಳೆಯ ಕಾಲಿಗೆ ಕೊಂಚ ಪ್ರಮಾಣದಲ್ಲಿ ಪೆಟ್ಟಾಗಿದೆ. ಒಮ್ಮೆ ಎಡವಿದಂತೆ ಮಾಡಿದ ಮಹಿಳೆ ಬಳಿಕ ಸರಿಯಾಗಿ ನಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಇನ್ನು ಈ ವಿಚಾರವಾಗಿ ಮಾತನಾಡಿದ ಉಡ್ಮುರ್ಟಿಯಾ ಅಸೋಸಿಯೇಷನ್​​ ಆಫ್​ ಕೌನ್ಸಿಲ್ಸ್​ ಆಫ್​ ಹೌಸಸ್​ನ ಚೇರ್​ ಮನ್​ ಅಲೆಕ್ಸಾಂಡರ್​ ಎವ್ಸೀನ್​​ ಅಪಾರ್ಟ್​ಮೆಂಟ್​ನ ಮಾಲೀಕನಿಗೆ ಸೇರಿದ ಆಸ್ತಿಯಾದ್ದರಿಂದ ಕಂಪನಿಯನ್ನು ದೂಷಿಸುವಂತಿಲ್ಲ ಎಂದು ಹೇಳಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...