ಕೊರೊನಾ ಸಂಕಷ್ಟದಿಂದ ಉಂಟಾದ ಲಾಕ್ಡೌನ್ನಿಂದಾಗಿ ಈ ವರ್ಷ ಜನತೆ ಸಂಪೂರ್ಣ ವಿಭಿನ್ನವಾದ ಜೀವನಶೈಲಿಯನ್ನ ರೂಢಿಸಿಕೊಂಡಿದ್ದಾರೆ. ಆದರೆ ಲಾಕ್ಡೌನ್ನ ಎಫೆಕ್ಟ್ ಪುರುಷ ಹಾಗೂ ಮಹಿಳೆಯರ ಮನೋಭಾವನೆಯ ಮೇಲೆ ವಿಭಿನ್ನ ಪರಿಣಾಮ ಬೀರಿದೆ.
ಕೆನಡಾದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಲಾಕ್ಡೌನ್ ಸಮಯದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರು ಖಿನ್ನತೆ ಹಾಗೂ ಆತಂಕಕ್ಕೆ ಒಳಗಾಗಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.
ಕ್ಯಾಲ್ಗರಿ ವಿಶ್ವವಿದ್ಯಾಲಯದ ಸಂಶೋಧಕರು ಹ್ಯಾಚ್ಕಿಸ್ ಬ್ರೇನ್ ಇನ್ಸ್ಟಿಟ್ಯೂಟ್ನ ಸಹಯೋಗದೊಂದಿಗೆ ಲಾಕ್ಡೌನ್ ಅವಧಿಯಲ್ಲಿ ಪುರುಷರು ಹಾಗೂ ಮಹಿಳೆಯರ ನಿದ್ರೆ ಪ್ರಮಾಣ, ಮಾನಸಿಕ ಸ್ಥಿತಿಗಳನ್ನ ಅಧ್ಯಯನ ಮಾಡಿದ್ರು. ಕೆನಡಾದ 112 ಪುರುಷರು ಹಾಗೂ 459 ಮಹಿಳೆಯರ ಮೇಲೆ ಆನ್ಲೈನ್ ಸಮೀಕ್ಷೆ ನಡೆಸುವ ಮೂಲಕ ಈ ಅಧ್ಯಯನವನ್ನ ಕೈಗೊಳ್ಳಲಾಯ್ತು.
ಲಾಕ್ಡೌನ್ ಸಮಯದಲ್ಲಿ 39 ಪ್ರತಿಶತಕ್ಕಿಂತ ಹೆಚ್ಚಿನ ಮಹಿಳೆಯರು ನಿದ್ರಾಹೀನತೆ ಸಮಸ್ಯೆಗೆ ಸಿಲುಕಿದ್ದಾರೆ. ಕೇವಲ ನಿದ್ರಾಹೀನತೆ ಮಾತ್ರವಲ್ಲದೇ ಖಿನ್ನತೆ ಹಾಗೂ ಆತಂಕಕ್ಕೆ ಸಂಬಂಧಿಸಿದ ಲಕ್ಷಣಗಳೂ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬಂದಿದೆ.