alex Certify ಸೆಲ್ಫಿ ಹುಚ್ಚು: ಜೇನು ಕಚ್ಚಿ ತುಟಿಯೂದಿಸಿಕೊಂಡ ಸುಂದರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲ್ಫಿ ಹುಚ್ಚು: ಜೇನು ಕಚ್ಚಿ ತುಟಿಯೂದಿಸಿಕೊಂಡ ಸುಂದರಿ…!

ಬೀಜಿಂಗ್: ಸೆಲ್ಫಿ ವಿಡಿಯೋ ಹುಚ್ಚಿನಿಂದ ಚೀನಾದ 29 ವರ್ಷದ ಸುಂದರ ಮಹಿಳೆ ತುಟಿಯೂದಿಸಿಕೊಂಡಿದ್ದಾಳೆ.
ಆಕೆಗೆ ಜೇನು ನೊಣ ಕಚ್ಚಿ ತುಟಿ ಕೆಂಪು ಸಾಸ್ ಹಾಕಿದ ಬನ್‌ನಂತೆ ಊದಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 10 ಮಿಲಿಯನ್ ವೀಕ್ಷಣೆ ಪಡೆದಿದೆ.

ಪೂರ್ವ ಚೀನಾದ ಫುಜಿನಾನ್ ಪ್ರದೇಶದ ಕ್ಸಿಯಾಪು ಕೌಂಟಿ ಎಂಬ ಪ್ರದೇಶದಲ್ಲಿ ಘಟನೆ ನಡೆದಿದ್ದು, ಮಹಿಳೆಯ ಹೆಸರು ಮಾತ್ರ ತಿಳಿದುಬಂದಿಲ್ಲ.

ಮಹಿಳೆ ಜೇನುಗೂಡಿನ ಸಮೀಪ ಸೆಲ್ಫಿ ವಿಡಿಯೋ ಮಾಡುತ್ತಿದ್ದಳು. ಜೇನು ನೊಣವೊಂದು ಬಂದು ಮೇಲ್ದುಟಿಯ ಮೇಲೆ ಕುಳಿತುಕೊಂಡಿತು. ಆಕೆ ಅದನ್ನು ಹಾರಿಸುವ ಮೊದಲೇ ನೊಣ ಕಚ್ಚಿ ಹಾರಿ ಹೋಯಿತು. ಅಷ್ಟು ಹೊತ್ತು ಖುಷಿಯಿಂದಲೇ ಪೋಸ್ ನೀಡುತ್ತಿದ್ದ ಮಹಿಳೆ ಜೇನು ನೋಣ ಕಚ್ಚಿದ ಉರಿಯಿಂದ ಇದ್ದಕ್ಕಿದ್ದಂತೆ ಅಳಲಾರಂಭಿಸಿದಳು. ಒಮ್ಮೆಲೇ ಆಕೆಯ ತುಟಿ ಊದಲು ಪ್ರಾರಂಭವಾಯಿತು. ಕೆಲವೇ ತಾಸಿನಲ್ಲಿ ಆಕೆಯ ತುಟಿ ಬನ್‌ನಷ್ಟು ದೊಡ್ಡದಾಗಿಬಿಟ್ಟಿತು.

‘ಜೇನು ನೊಣಗಳ ಸೆಲ್ಫಿ ವಿಡಿಯೋ ಮಾಡಿದ್ದರಿಂದ ನನಗೆ ಅವುಗಳ ಕಡಿತ ಉಚಿತವಾಗಿ ಸಿಕ್ಕಿತು. ಭಯಪಡುವ ವಿಷಯ ಎಂದರೆ ನನ್ನ ತುಟಿ ಊದಿಕೊಂಡಿತು. ಎಷ್ಟು ಎಂದರೆ ನಾನು ನೀರು ಕುಡಿಯಲೂ ಸಾಧ್ಯವಾಗುತ್ತಿರಲಿಲ್ಲ ’ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ಆಕೆಯ ಸಹಜವಾಗಿದ್ದಾಗಿನ ಮಧುರ ತುಟಿ ಹಾಗೂ ಮೇಲ್ದುಟಿ ಊದಿಕೊಂಡಾಗಿನ ಚಿತ್ರಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಜೇನು ನೊಣಗಳು ಕಡಿದಾಗಿನ ನಂಜು ಹಾಗೂ ಇತರ ಕೀಟಗಳ ಕಡಿದಾಗಿನ ನಂಜು ವಿಭಿನ್ನವಾಗಿರುತ್ತವೆ. ಜೇನು ನೊಣಗಳು ಮಾನವನ ದೇಹಕ್ಕೆ ಕಚ್ಚಿ ಅದರಲ್ಲಿರುವ ಅಂಬನ್ನು ಚರ್ಮದ ಮೇಲೆ ಬಿಟ್ಟರೆ ಹೆಚ್ಚು ಬಾವು ಹಾಗೂ ನೋವಾಗುತ್ತದೆ. ಅವು ಕುಳಿತ ತಕ್ಷಣ ನಾವು ಭಯಗೊಂಡು ಅದನ್ನು ಓಡಿಸಲು ಮುಂದಾದರೆ, ಅದೂ ಸಾವಿನ ಭಯದಲ್ಲಿ ಕಚ್ಚಿಬಿಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...