ಬ್ರೆಜಿಲ್ ಮೂಲದ ಕಲಾವಿದನಿಗೆ ಮಹಿಳೆಯೊಬ್ಬಳು ವಾಚಾಮಗೋಚರವಾಗಿ ವಾಗ್ದಾಳಿ ನಡೆಸಿ, ಆತನ ಅರ್ಟ್‌ವರ್ಕ್‌ನ್ನು ಧ್ವಂಸ ಮಾಡಿರುವ ವಿಡಿಯೊ ಇದೀಗ ವೈರಲ್ ಆಗಿದೆ.
ಹೌದು, ಈ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಬ್ರೆಜಿಲ್ ಮೂಲದ ರೊಮಿರಿಯೊ ಬ್ರಿಟ್ಟೋ ಎನ್ನುವ ಕಲಾವಿದನ ಮೇಲೆ ಹೊಟೇಲ್ ಮಾಲಕಿ ಒಬ್ಬರು ತಮ್ಮ ಹೋಟೆಲ್ ಸಿಬ್ಬಂದಿಗಳಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಗಲಾಟೆ ಮಾಡಿದ್ದಾರೆ. ಈ ಗಲಾಟೆಯಲ್ಲಿ ಸುಮಾರು 4 ಲಕ್ಷ ಮೌಲ್ಯದ ಆರ್ಟ್‌ವರ್ಕ್ ಒಂದನ್ನು ಒಡೆದು ಹಾಕಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೂ ಈ ಘಟನೆ 2017ರಲ್ಲಿ ನಡೆದಿದ್ದು, ರೊಮಿರಿಯೋ ತಮ್ಮ ಸ್ನೇಹಿತರೊಂದಿಗೆ ಹೋಟೆಲ್ ಗೆ ಹೋಗಿ, ಅಲ್ಲಿ ಎಂಟು ಜನರಿಗೆ ಆಹಾರ ಹೇಳಿದ್ದಾರೆ. ಆದರೆ ಬಳಿಕ ರಿಯಾಯಿತಿ ನೀಡುವಂತೆ, ಮಾತನಾಡದಂತೆ ಒತ್ತಾಯಿಸಿದ್ದಾರೆ. ಈ ರೀತಿ ಮಾಡಿ ತನ್ನ ಸಿಬ್ಬಂದಿಗೆ ಅವಮಾನಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಸುಮಾರು 6.7 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಆದರೆ ಈ ರೀತಿ ಒಂದು ಕಡೆ ವಾದವನ್ನು ಮಾತ್ರ ಕೇಳುತ್ತಿರುವ ನೆಟ್ಟಿಗರ ವಿರುದ್ಧ ಕಲಾವಿದ ರೊಮಿಯೊ ಬೇಸರ ವ್ಯಕ್ತಪಡಿಸಿದ್ದಾರೆ.
https://twitter.com/sortarican__/status/1294357095366754304?ref_src=twsrc%5Etfw%7Ctwcamp%5Etweetembed%7Ctwterm%5E1294357095366754304%7Ctwgr%5E&ref_url=https%3A%2F%2Fwww.ndtv.com%2Foffbeat%2Fwoman-yells-at-artist-romero-britto-smashes-artwork-in-viral-video-heres-why-2280645