alex Certify ದಂಗಾಗಿಸುತ್ತೆ ಈ ಮಹಿಳೆ ಬಾಯಿಯ ಸುತ್ತಳತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಈ ಮಹಿಳೆ ಬಾಯಿಯ ಸುತ್ತಳತೆ….!

ಸಮಂತಾ ರಾಮ್​ಸ್ಡೆಲ್​ ಎಂಬ 30 ವರ್ಷದ ಮಹಿಳೆ ತನ್ನ ವಿಶಿಷ್ಟ ದೇಹ ರಚನೆ ಮೂಲಕ ಟಿಕ್​ಟಾಕ್​ನಲ್ಲಿ ಸಖತ್​ ಫೇಮಸ್​ ಆಗಿದ್ದಾರೆ.

ವಿಶ್ವದ ಅತಿ ದೊಡ್ಡ ಬಾಯಿ ನನ್ನದು ಎಂದು ಹೇಳಿಕೊಳ್ತಿರೋ ಈ ಮಹಿಳೆ 7.5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ.

ಈಕೆ ಬಾಯಿ 3.75 ಇಂಚು ಆಗಿದ್ದು ಗಿನ್ನೆಸ್​ ವಿಶ್ವದಾಖಲೆ ಮಾಡಿದವರ ಬಾಯಿಗಿಂತಲೂ ನನ್ನ ಬಾಯಿ ದೊಡ್ಡದು ಅನ್ನೋದು ಸಮಂತಾ ಅಭಿಪ್ರಾಯವಾಗಿದೆ.

ತನ್ನ ಬಾಯಿ ಬಗ್ಗೆಯೇ ಸಾಕಷ್ಟು ವಿಡಿಯೋಗಳನ್ನ ಹಾಕಿರುವ ಈ ಮಹಿಳೆ ಇಡೀ ಸೇಬು, ಸ್ಯಾಂಡ್​​ವಿಚ್​ಗಳನ್ನ ಬಾಯಿಯೊಳಗೆ ಹಾಕಿ ತೋರಿಸುತ್ತಾಳೆ. ಅಲ್ಲದೇ ಟೇಪ್​ ಸಹಾಯದಿಂದ ಬಾಯಿಯನ್ನ ಅಳತೆ ಮಾಡಿರುವ ವಿಡಿಯೋವನ್ನೂ ಈಕೆ ಪೋಸ್ಟ್ ಮಾಡಿದ್ದಾಳೆ.

2019ರಲ್ಲೇ ನಾನು ಟಿಕ್​ಟಾಕ್​ನಲ್ಲಿ ಖಾತೆ ತೆರೆದಿದ್ದೆ. ಆದರೆ ಏಪ್ರಿಲ್​ 2020ರವರೆಗೂ ನಾನು ಇದರಲ್ಲಿ ವಿಡಿಯೋಗಳನ್ನ ಪೋಸ್ಟ್ ಮಾಡ್ತಿರಲಿಲ್ಲ. ಆದರೆ ಲಾಕ್​ಡೌನ್​ನಲ್ಲಿ ನಾನು ಹಾಕಿದ ವಿಡಿಯೋಗಳು ಹೆಚ್ಚಿನ ಲೈಕ್ಸ್ ಪಡೆದವು. ಅದಾದ ಬಳಿಕ ಮಿಲಿಯನ್​ಗಟ್ಟಲೇ ಜನರು ನನ್ನನ್ನ ಫಾಲೋ ಮಾಡೋಕೆ ಶುರು ಮಾಡಿದ್ರು ಅಂತಾ ಸಮಂತಾ ಹೇಳಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...