alex Certify ಅಚ್ಚರಿಗೆ ಕಾರಣವಾಗಿದೆ ಈ ಯುವತಿ ಸೊಂಟದ ಸುತ್ತಳತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಈ ಯುವತಿ ಸೊಂಟದ ಸುತ್ತಳತೆ…!

ಜಗತ್ತಿನಲ್ಲೇ ಅತ್ಯಂತ ಸಣ್ಣದಾದ ನಡುವನ್ನು ಹೊಂದಿದ್ದಾರೆ ಎಂದು ಹೇಳಲಾಗುವ ಮ್ಯಾನ್ಮಾರ್‌ನ ಸು ನಿಯಾಂಗ್ ಹೆಸರಿನ ಯುವತಿಯೊಬ್ಬರು ಈಗ ನೆಟ್‌ನಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಇವರ ನಡವಿನ ಸುತ್ತಳತೆ ಕೇವಲ 13.7 ಇಂಚುಗಳಷ್ಟಿದೆ.

23 ವರ್ಷದ ಇವರು ಖುದ್ದು ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಈ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಆದರೆ, ತನ್ನ ಫೋಟೋಗಳನ್ನು ಸಿಕ್ಕಾಪಟ್ಟೆ ಎಡಿಟ್ ಮಾಡಿಕೊಂಡು ಅತಿ ತೆಳ್ಳನೆಯ ನಡು ಹೊಂದಿದವರಂತೆ ಕಾಣುತ್ತಿದ್ದಾರೆ ಎಂಬ ಆಪಾದನೆಯೂ ಸಹ ಈಕೆಯ ಮೇಲೆ ಇದೆ.

ಆದರೆ ಈ ಆಪಾದನೆಗಳನ್ನು ಅಲ್ಲಗಳೆದಿರುವ ಯುವತಿ, ತಾವು ಬಹಳ ಆರೋಗ್ಯಕರ ಆಹಾರಾಭ್ಯಾಸವನ್ನು ಹೊಂದಿದ್ದು, ವಂಶವಾಹಿಗಳ ಕಾರಣದಿಂದಲೂ ಸಹ ತಮ್ಮ ನಡು ಇಷ್ಟು ಸಣ್ಣದಿದೆ ಎಂದಿದ್ದಾರೆ.

ಬ್ರಿಟನ್‌ನ ಎಥೆಲ್ ಗ್ರಾಂಗರ್‌ ಎಂಬುವವರು 13 ಇಂಚುಗಳ ನಡುವನ್ನು ಹೊಂದಿದ್ದರು. ಇದು 1939ರಿಂದಲೂ ಗಿನ್ನೆಸ್ ದಾಖಲೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...