ಕೊರೊನಾ ವೈರಸ್ನಿಂದ ಪಾರಾಗಬೇಕು ಅಂತಾ ವಿಶ್ವದ ಎಲ್ಲಾ ರಾಷ್ಟ್ರಗಳು ಕಳೆದ ವರ್ಷದಿಂದಲೇ ಮಾಸ್ಕ್ ಬಳಕೆಯನ್ನ ಕಡ್ಡಾಯಗೊಳಿಸಿವೆ.
ಆದರೆ ಕೆಲವರು ಮಾತ್ರ ಕೊರೊನಾ ವೈರಸ್ ಅನ್ನೋದೇ ಇಲ್ಲ. ಹೀಗಾಗಿ ಮಾಸ್ಕ್ ಧರಿಸೋಕೆ ಏಕೆ ಎಂಬ ವ್ಯರ್ಥ ವಾದವನ್ನ ಮಾಡುತ್ತಲೇ ಇರ್ತಾರೆ.
ಕೊರೊನಾ ವಿರುದ್ಧ ಲಸಿಕೆ ಪ್ರಯೋಗ ಆರಂಭವಾಗಿದ್ದರೂ ಸಹ ಮಾಸ್ಕ್ ಬಳಕೆಗೆ ಇನ್ನೂ ಮುಕ್ತಾಯ ಹಾಡಿಲ್ಲ. ಆದರೆ ಕೊರೊನಾದ ಆರಂಭದ ದಿನಗಳಲ್ಲಿ ಮಾಸ್ಕ್ ಹಾಕಿಕೊಳ್ಳೋದನ್ನ ತಿರಸ್ಕರಿಸಿ ಎಂದು ಟ್ಯಾಟೂವನ್ನೇ ಹಾಕಿಸಿಕೊಂಡಿದ್ದ ಯುವತಿ ತಾನು ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ಪಶ್ಚಾತಾಪ ಪಡುತ್ತಿದ್ದಾಳೆ.
ಟಿಕ್ಟಾಕ್ನಲ್ಲಿ ಯುವತಿ ವಿಡಿಯೋ ಶೇರ್ ಮಾಡಿದ್ದಾರೆ. ಜೀವನದಲ್ಲಿ ಹಾಕಿಸಿಕೊಂಡು ಅತ್ಯಂತ ಕೆಟ್ಟ ಟ್ಯಾಟೂ ಪ್ರದರ್ಶನ ಮಾಡುವ ಟ್ರೆಂಡ್ ಒಂದರ ಪ್ರಕಾರ ಈ ಯುವತಿ ತಮ್ಮ ಮಾಸ್ಕ್ ವಿರೋಧಿ ಟ್ಯಾಟೂವನ್ನ ಪ್ರದರ್ಶಿಸಿದ್ದಾರೆ.