alex Certify 100 ದಿನಗಳ ಕಾಲ ಒಂದೇ ಡ್ರೆಸ್​ ಧರಿಸಿದ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

100 ದಿನಗಳ ಕಾಲ ಒಂದೇ ಡ್ರೆಸ್​ ಧರಿಸಿದ ಮಹಿಳೆ..!

ಬೋಸ್ಟನ್​ನಲ್ಲಿ ವಾಸಿಸುತ್ತಿರುವ ಸಾರಾ ರಾಬಿನ್ಸ್ ಕೋಲ್​ ಎಂಬ ಮಹಿಳೆ ತಮ್ಮ ಕಪ್ಪು ಬಣ್ಣದ ಉದ್ದ ಕೈ ತೋಳು, ಮಂಡಿಯುದ್ದದ ಡ್ರೆಸ್​ನ್ನು ಬರೋಬ್ಬರಿ 100 ದಿನಗಳ ಕಾಲ ಧರಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ಅಂದಹಾಗೆ ಈ ಉಡುಪನ್ನ ಮೆರಿನೋ ಉಣ್ಣೆಯಿಂದ ತಯಾರು ಮಾಡಲಾಗಿದೆ.

52 ವರ್ಷದ ಸಾರಾ 100 ದಿನದ ಡ್ರೆಸ್​ ಚಾಲೆಂಜ್​ನಲ್ಲಿ ಭಾಗಿಯಾಗಿದ್ದರು. ಕಳೆದ ವರ್ಷದ ಸೆಪ್ಟೆಂಬರ್​​ 6ರಿಂದ ಫ್ಯಾಶನ್​, ಟ್ರೆಂಡ್​ ಇವೆಲ್ಲ ತ್ಯಜಿಸುವ ಮೂಲಕ ಪರಿಸರಕ್ಕೆ ಒಂದು ಕೊಡುಗೆ ನೀಡಲು ನಿರ್ಧರಿಸಿದ್ದರು. 100 ದಿನಗಳ ಕಾಲ ಒಂದೇ ಡ್ರೆಸ್​ ಧರಿಸಿ ಯಶಸ್ವಿಯಾಗಿರುವ ಮಹಿಳೆ ಇನ್ನೊಂದು ವರ್ಷ ಯಾವುದೇ ಬಟ್ಟೆ ಖರೀದಿ ಮಾಡಲ್ಲ ಅಂತಾ ಹೇಳಿದ್ದಾರೆ.

ಆಶ್ಚರ್ಯ ಅಂದರೆ ನಾನು ಒಂದೇ ಡ್ರೆಸ್​ನ್ನು 100 ದಿನಗಳ ಕಾಲ ಧರಿಸಿದ್ದೇನೆ. ಅಲ್ಲದೇ ಇದರಿಂದ ನನಗೆ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಹೀಗಾಗಿ ನಾನು ಈ ವರ್ಷದ ಜನವರಿ 1ರಿಂದ ಮುಂದಿನ ಹೊಸ ವರ್ಷದ ದಿನದವರೆಗೂ ಯಾವುದೇ ಉಡುಪನ್ನ ಖರೀದಿ ಮಾಡಬಾರದೆಂಬ ನಿರ್ಧಾರಕ್ಕೆ ಬಂದಿದ್ದೇನೆ ಅಂತಾ ಹೇಳ್ತಾರೆ ಸಾರಾ.

ಈ ಟಾಸ್ಕ್​ ಬಳಿಕ ನನ್ನ ಬಳಿ ಪ್ರತಿ ಕಾರ್ಯಕ್ರಮಕ್ಕೂ ಬೇಕಾಗುವ ಎಲ್ಲಾ ರೀತಿಯ ಬಟ್ಟೆ ಸಂಗ್ರಹ ಇದೆ ಅನ್ನೋದು ನನ್ನ ಅರಿವಿಗೆ ಬಂದಿದೆ. ಹೀಗಾಗಿ ಈ ನಿರ್ಧಾರ ಬಳಿಕ ಲಾಂಡ್ರಿ, ಬಟ್ಟೆಗೆ ಅನವಶ್ಯಕ ಹಣ ಖರ್ಚು ಮಾಡೋದು, ಪರಿಸರಕ್ಕೆ ಹಾನಿಯಾಗಬಲ್ಲ ಶಾಪಿಂಗ್​ ಇವೆಲ್ಲವನ್ನ ಈ ವರ್ಷದಿಂದ ತ್ಯಜಿಸಲಿದ್ದೇನೆ ಎಂದು ಹೇಳಿದ್ದಾರೆ. ತಮ್ಮ 100 ದಿನದ ಉಡುಗೆಗಳನ್ನ ಸಾರಾ ಇನ್ಸ್​ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...