
52 ವರ್ಷದ ಸಾರಾ 100 ದಿನದ ಡ್ರೆಸ್ ಚಾಲೆಂಜ್ನಲ್ಲಿ ಭಾಗಿಯಾಗಿದ್ದರು. ಕಳೆದ ವರ್ಷದ ಸೆಪ್ಟೆಂಬರ್ 6ರಿಂದ ಫ್ಯಾಶನ್, ಟ್ರೆಂಡ್ ಇವೆಲ್ಲ ತ್ಯಜಿಸುವ ಮೂಲಕ ಪರಿಸರಕ್ಕೆ ಒಂದು ಕೊಡುಗೆ ನೀಡಲು ನಿರ್ಧರಿಸಿದ್ದರು. 100 ದಿನಗಳ ಕಾಲ ಒಂದೇ ಡ್ರೆಸ್ ಧರಿಸಿ ಯಶಸ್ವಿಯಾಗಿರುವ ಮಹಿಳೆ ಇನ್ನೊಂದು ವರ್ಷ ಯಾವುದೇ ಬಟ್ಟೆ ಖರೀದಿ ಮಾಡಲ್ಲ ಅಂತಾ ಹೇಳಿದ್ದಾರೆ.
ಆಶ್ಚರ್ಯ ಅಂದರೆ ನಾನು ಒಂದೇ ಡ್ರೆಸ್ನ್ನು 100 ದಿನಗಳ ಕಾಲ ಧರಿಸಿದ್ದೇನೆ. ಅಲ್ಲದೇ ಇದರಿಂದ ನನಗೆ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಹೀಗಾಗಿ ನಾನು ಈ ವರ್ಷದ ಜನವರಿ 1ರಿಂದ ಮುಂದಿನ ಹೊಸ ವರ್ಷದ ದಿನದವರೆಗೂ ಯಾವುದೇ ಉಡುಪನ್ನ ಖರೀದಿ ಮಾಡಬಾರದೆಂಬ ನಿರ್ಧಾರಕ್ಕೆ ಬಂದಿದ್ದೇನೆ ಅಂತಾ ಹೇಳ್ತಾರೆ ಸಾರಾ.
ಈ ಟಾಸ್ಕ್ ಬಳಿಕ ನನ್ನ ಬಳಿ ಪ್ರತಿ ಕಾರ್ಯಕ್ರಮಕ್ಕೂ ಬೇಕಾಗುವ ಎಲ್ಲಾ ರೀತಿಯ ಬಟ್ಟೆ ಸಂಗ್ರಹ ಇದೆ ಅನ್ನೋದು ನನ್ನ ಅರಿವಿಗೆ ಬಂದಿದೆ. ಹೀಗಾಗಿ ಈ ನಿರ್ಧಾರ ಬಳಿಕ ಲಾಂಡ್ರಿ, ಬಟ್ಟೆಗೆ ಅನವಶ್ಯಕ ಹಣ ಖರ್ಚು ಮಾಡೋದು, ಪರಿಸರಕ್ಕೆ ಹಾನಿಯಾಗಬಲ್ಲ ಶಾಪಿಂಗ್ ಇವೆಲ್ಲವನ್ನ ಈ ವರ್ಷದಿಂದ ತ್ಯಜಿಸಲಿದ್ದೇನೆ ಎಂದು ಹೇಳಿದ್ದಾರೆ. ತಮ್ಮ 100 ದಿನದ ಉಡುಗೆಗಳನ್ನ ಸಾರಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

