ಕ್ಯಾಲಿಫೋರ್ನಿಯಾ: ಕೊರೊನಾ ವೈರಸ್ ಕಾರಣಕ್ಕೆ ಹೊರ ಹೋಗುವಾಗ ಮಾಸ್ಕ್ ಕಡ್ಡಾಯವಾಗಿದೆ. ಆದರೆ ಊಟ ತಿಂಡಿ ಮುಂತಾದ ಸಂದರ್ಭದಲ್ಲಿ ಮಾಸ್ಕ್ ಬಳಕೆಗೆ ವಿನಾಯಿತಿ ಬೇಕು.
ಮಾಸ್ಕ್ ಹಾಕದ್ದಕ್ಕೆ ಮಹಿಳೆಯೊಬ್ಬಳು ಆತ್ಮರಕ್ಷಣೆಗೆ ಬಳಸುವ ದ್ರವವನ್ನು ದಂಪತಿಗೆ ಸ್ಪ್ರೇ ಮಾಡಿದ ಘಟನೆಯೊಂದು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೊದಲ್ಲಿ ಇತ್ತೀಚೆಗೆ ನಡೆದಿದೆ.
ಶೆರಿಲ್ಯೀನ್ ಒ-ಬ್ರೇನ್ ಹಾಗೂ ಅವರ ಪತಿ ಪಾರ್ಕ್ ನ ಖಾಲಿ ಸ್ಥಳದಲ್ಲಿ ಕುಳಿತು ಊಟ ಮಾಡುತ್ತಿದ್ದರು. ಆಗ ಬಂದ ಹಿರಿಯ ಮಹಿಳೆಯೊಬ್ಬರು “ನಿಮಗೆ ಸೀರಿಯಸ್ ನೆಸ್ ಇಲ್ಲ” ಎಂದು ದೂರುತ್ತ ಮಾಸ್ಕ್ ಹಾಕದ ಕಾರಣ ನೀಡಿ ಆತ್ಮರಕ್ಷಣೆಗೆ ಬಳಸುವ ಮ್ಯಾಕ್ ಸ್ಪ್ರೇಯನ್ನು ಮೈಗೆಲ್ಲ ಹೊಡೆದು ಹೊರಟಿದ್ದಾರೆ.
ಶೆರಿಲ್ಯೀನ್ ಅದನ್ನು ವಿಡಿಯೋ ಮಾಡಿದ್ದು, ಮಹಿಳೆಯ ವಿರುದ್ಧ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ನಾವು ಕುಳಿತು ಊಟ ಮಾಡುತ್ತಿದ್ದೆವು. ಊಟ ಮಾಡುವಾಗ ಮಾಸ್ಕ್ ಧರಿಸುವುದು ಹೇಗೆ ಹೇಳಿ..? ಮಹಿಳೆ ಆಗಮಿಸಿ ದೌರ್ಜನ್ಯ ಎಸಗಿದ್ದಾರೆ. ನನ್ನ ಪತಿಯನ್ನು ನಿಂದಿಸಿದ್ದಾರೆ. ಆಕೆಯನ್ನು ಹುಡುಕಲು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.
https://www.facebook.com/ash.obrien.102/videos/640288393256161/?t=3