alex Certify ಎದೆ ನಡುಗಿಸುತ್ತೆ ಮಹಿಳೆ ಹಲ್ಲು ಕಿತ್ತುಕೊಳ್ಳುವ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ನಡುಗಿಸುತ್ತೆ ಮಹಿಳೆ ಹಲ್ಲು ಕಿತ್ತುಕೊಳ್ಳುವ ವಿಡಿಯೋ

ಇದೊಂದು ಮೈ ಜುಮ್ಮೆನಿಸುವ ಸುದ್ದಿ. ದಂತವೈದ್ಯರಲ್ಲಿ ಅಪಾಯಿಂಟ್ಮೆಂಟ್ ಸಿಗದ ಕಾರಣ ಮಹಿಳೆಯೊಬ್ಬರು ತಂತಿಗಳನ್ನು ಕತ್ತರಿಸಲು ಬಳಸುವ ಕಟಿಂಗ್ ಪ್ಲೇಯರ್ ಬಳಕೆ ಮಾಡಿ ಹಲ್ಲು ಕಿತ್ತುಕೊಂಡಿದ್ದಾರೆ.

ಲಾಕ್ಡೌನ್ ಕಾರಣ ದಂತವೈದ್ಯರನ್ನು ಭೇಟಿ ಮಾಡಲು ಸಾಧ್ಯವಾಗದ 41 ವರ್ಷದ ಫೇ ರೇವರ್ಡ್ ಕಟಿಂಗ್ ಪ್ಲೇಯರ್ ಬಳಸಿ ಮುರಿದ ಹಲ್ಲು ಹೊರತೆಗೆಯುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆಯ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.

ಹಲ್ಲು ನೋವನ್ನು ತಾಳಲಾರದೆ ದಂತ ವೈದ್ಯರನ್ನು ಸಂಪರ್ಕಿಸಲು ಪ್ರಯತ್ನಿಸಿದಾಕೆಗೆ ಪೂರಕ ಪ್ರತಿಕ್ರಿಯೆ ಸಿಗಲಿಲ್ಲ. ಲಾಕ್ ಡೌನ್ ಕಾರಣ ದಂತ ಚಿಕಿತ್ಸಾಲಯ ಮುಚ್ಚಲಾಗಿತ್ತು. ಹೀಗಾಗಿ ನೋವು ನಿವಾರಕ ಸೇವಿಸಲು ಸಲಹೆ ನೀಡಲಾಗಿತ್ತು. ಆದರೆ ಆಕೆಯ ನೋವು ಕಡಿಮೆಯಾಗಲಿಲ್ಲ. ತುರ್ತು ಸೇವೆಗೆ ಕರೆ ಮಾಡಿದರೂ ಸ್ಪಂದನೆ ಸಿಗಲಿಲ್ಲ.

ಕಟಿಂಗ್ ಪ್ಲೇಯರ್ ಬಳಸಿ ಹಲ್ಲು ಕಿತ್ತುಕೊಂಡ ಬಗ್ಗೆ ವಿಡಿಯೋದಲ್ಲಿ ಹೇಳಿಕೊಂಡಿರುವ ಆಕೆ, ನನಗೆ ಹೆರಿಗೆ ನೋವಿಗಿಂತಲೂ ಇದು ಕೆಟ್ಟದಾಗಿತ್ತು. ನಾನು ಹಿಂದೆಂದೂ ಈ ರೀತಿಯ ನೋವನ್ನು ಅನುಭವಿಸಿರಲಿಲ್ಲ. ದಂತ ವೈದ್ಯರ ನೆರವು ಪಡೆಯಲು ಸಾಕಷ್ಟು ಪ್ರಯತ್ನಪಟ್ಟೆ, ಸಾಧ್ಯವಾಗಿರಲಿಲ್ಲ ಎಂದಿದ್ದಾರೆ. ನನ್ನ ಹಲ್ಲನ್ನು ನಾನೇ ಹೊರತೆಗೆಯುವುದು ಒಂದೇ ಮಾರ್ಗವೆಂದು ಅರಿತು ಈ ಪ್ರಯತ್ನ ಮಾಡಿದೆ ಎಂದಿದ್ದಾರೆ.

Why have I had to resort to this? Why can’t I see a dentist? Apparently unless I can’t breath or have a temperature then my referral from my dentist will be rejected? Spoke to dentist just given advice. Called 111 and they referred me back to my dentist to be triaged. I really am going out of my mind with the pain! In 2020 didn’t think things could get much worse! #homedentistry #lockdown2020 #fillingdroppedout #toothnowcracked #painunbearable #stillnotout #anyoneiknowadentist? #barbaric

Posted by Fay Rayward on Monday, May 11, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...