alex Certify ವಿಮಾನದಲ್ಲಿ ಬಟ್ಟೆ ಬಿಚ್ಚಲು ಮುಂದಾದ ಮಹಿಳೆಯನ್ನು ಕಟ್ಟಿಹಾಕಿದ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಬಟ್ಟೆ ಬಿಚ್ಚಲು ಮುಂದಾದ ಮಹಿಳೆಯನ್ನು ಕಟ್ಟಿಹಾಕಿದ ಸಿಬ್ಬಂದಿ

ಮಹಿಳಾ ಪ್ರಯಾಣಿಕರೊಬ್ಬರು ಪದೇ ಪದೇ ತಮ್ಮ ಒಳ ಉಡುಪನ್ನು ಸಹ ಪ್ರಯಾಣಿಕರ ಎದುರೇ ತೆಗೆಯಲು ಯತ್ನಿಸಿದ ಕಾರಣ ಆಕೆಯನ್ನು ಸೀಟಿಗೆ ಹಗ್ಗವೊಂದನ್ನು ಬಳಸಿ ಕಟ್ಟಿ ಹಾಕಿದ ಘಟನೆ ರಷ್ಯಾದ ವಿಮಾನವೊಂದರಲ್ಲಿ ನಡೆದಿದೆ.

ವ್ಲಾಡಿವೋಸ್ಟಾಕ್‌ನಿಂದ ಈ ವಿಮಾನ ಟೇಕಾಫ್‌ ಆದ ಕೂಡಲೇ 39 ವರ್ಷ ವಯಸ್ಸಿನ ಈ ಮಹಿಳೆ ಕ್ಯಾಬಿನ್‌ ಒಳಗೆ ಅಡ್ಡಾಡಲು ಆರಂಭಿಸಿದ್ದಾರೆ. ಡಿಪಾರ್ಚರ್‌ ಆದ 15 ನಿಮಿಷಗಳಾಗುತ್ತಲೇ ತನ್ನ ಬಟ್ಟೆಗಳನ್ನು ತೆಗೆಯುತ್ತಾ ಹೋದ ಈಕೆ ಮತ್ತೆ ಅವನ್ನು ಧರಿಸಿದ್ದಾಳೆ. ಮಾನಸಿಕ ಅಸ್ವಸ್ಥೆಯಂತೆ ಕಂಡ ಮಹಿಳೆ ಡ್ರಗ್ಸ್‌ ಸೇವಿಸಿದ್ದಾಳೆ ಎಂದು ಸಿಬ್ಬಂದಿಗೆ ಅನುಮಾನ ಬಂದಿದೆ.

‘ಪ್ರೇಮ ನಿವೇದನೆ’ಗೆ ಸಹಕರಿಸಲು ಪೊಲೀಸರನ್ನೇ ಕೋರಿದ ಭೂಪ

ಈಕೆಯ ಈ ಹುಚ್ಚಾಟದಿಂದ ಆತಂಕಿತರಾದ ಸಹ ಪ್ರಯಾಣಿಕರು ವಿಮಾನದ ಸಿಬ್ಬಂದಿಯೊಂದಿಗೆ ಸೇರಿಕೊಂಡು ಆಕೆಯನ್ನು ಸೀಟ್‌ಗೆ ಕಟ್ಟಿ ಹಾಕಿದ್ದಾರೆ.

ನಾವೋಸಿಬ್ರಿಸ್ಕ್‌ನಲ್ಲಿ ವಿಮಾನ ಲ್ಯಾಂಡ್ ಆಗುವವರೆಗೂ ಆಕೆಯನ್ನು ಕಟ್ಟಿಹಾಕಲಾಗಿದ್ದು, ಬಳಿಕ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ವಿಮಾನ ಹತ್ತುವ ಮುನ್ನ ಮಾದಕ ದ್ರವ್ಯ ಸೇವಿಸಿದ್ದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...