
ರೊಬರ್ಟಾ ಕ್ಲಾರ್ಕ್ ಎಂಬಾಕೆ ತನ್ನ ಬಾಸ್ ಬಳಿ ಕೆಟ್ಟ ಹವಾಮಾನದಿಂದಾಗಿ ಕೆಲಸ ಮಾಡಲು ಆಗ್ತಿಲ್ಲ ಎಂದು ಹೇಳಿದ್ದರು. ಸ್ಕಾಟ್ಲೆಂಡ್ನಲ್ಲಿ ಸದ್ಯ ತುಂಬಾನೇ ಹಿಮದ ಮಳೆಯಾಗ್ತಾ ಇದ್ದು ತಾಪಮಾನ ತುಂಬಾನೆ ಕಡಿಮೆ ಇದೆ.
ಗೆಳತಿಯೊಬ್ಬರ ಮನೆಯಲ್ಲಿ ಪಾರ್ಟಿ ಎಂಜಾಯ್ ಮಾಡುತ್ತಿದ್ದ ರೊಬರ್ಟಾ ತನ್ನ ಬಾಸ್ಗೆ ಶ್ಯಾಂಪೇನ್ ಬಾಟಲಿಯ ಫೋಟೋವೊಂದನ್ನ ಅಚಾನಕ್ ಆಗಿ ಶೇರ್ ಮಾಡಿದ್ದಾಳೆ. ಬಳಿಕ ರಾಬರ್ಟಾಗೆ ತಾನು ತನ್ನ ಬಾಸ್ಗೆ ತಪ್ಪಾಗಿ ಈ ಫೋಟೋ ಕಳಿಸಿಬಿಟ್ಟಿದ್ದೇನೆ ಎಂಬುದು ಅರಿವಾಗಿದೆ. ಕೂಡಲೇ ಮೆಸೇಜ್ ಮೂಲಕ ಕ್ಷಮೆಯಾಚಿಸಿದ್ದಾರೆ. ಆದರೆ ಈ ಸ್ಕ್ರೀನ್ಶಾಟ್ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗ್ತಿದೆ.