alex Certify ಮಹಿಳೆಯ ಜೀವ ಉಳಿಸಿದ ಸಿಲಿಕಾನ್ ಸ್ತನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯ ಜೀವ ಉಳಿಸಿದ ಸಿಲಿಕಾನ್ ಸ್ತನ…!

ಟೊರೊಂಟೊ: ಸೌಂದರ್ಯ ಶಸ್ತ್ರ ಚಿಕಿತ್ಸೆಯಿಂದ ಜೀವ ಕಳೆದುಕೊಂಡವರ ಸುದ್ದಿಯನ್ನು ಸಾಕಷ್ಟು ಓದಿರಬಹುದು. ಆದರೆ, ಕೆನಡಾದ ಮಹಿಳೆಯೊಬ್ಬರಿಗೆ ಇದು ಜೀವ ಉಳಿಸಿದೆ.

ಜಿಯನ್ ಕಾರ್ಲೊ ಮೆಕ್ ಎವನ್ಯೆ ಎಂಬವರು 2018 ರಲ್ಲಿ ನಡೆದ ವಿದ್ಯಮಾನವನ್ನು ಸಿಎನ್ಎನ್ ನ್ಯೂಸ್ ಗೆ ವಿವರಿಸಿದ್ದಾರೆ.  ಗುಂಡಿನ ದಾಳಿಗೆ ಒಳಗಾದ 30 ವರ್ಷದ ಈ ಮಹಿಳೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾಗಿದ್ದಾರೆ.

ಎದೆಗೆ ತೀರಾ ಹತ್ತಿರದಿಂದ ಗುಂಡಿನ ದಾಳಿ ನಡೆದಿತ್ತು. ಆದರೂ ಆ ಮಹಿಳೆ ಬದುಕಿದ್ದಾರೆ. ಅದಕ್ಕೆ ಕಾರಣ ಅವರು ಮಾಡಿಸಿಕೊಂಡಿದ್ದ ಬ್ರೆಸ್ಟ್ ಇಂಪ್ಲಾಂಟೇಶನ್.

ಈ ಚಿಕಿತ್ಸೆಯಲ್ಲಿ ಕೃತಕ ಸಿಲಿಕಾನ್ ಸ್ತನಗಳನ್ನು ಅಳವಡಿಸಲಾಗುತ್ತದೆ. ಗುಂಡಿನ ದಾಳಿಗೆ ಒಳಗಾದ ಮಹಿಳೆಗೆ ಗುಂಡು ಕೃತಕ ಸ್ತನಗಳಿಗೆ ತಾಗಿ ಎದೆಯ ಮೂಳೆಯಷ್ಟೇ ಮುರಿದಿದೆ. ಇದರಿಂದ ಅವರ ಜೀವ ಉಳಿದಿದೆ ಎಂದು ಜೆಯನ್ ಕಾರ್ಲೊ ತಿಳಿಸಿದ್ದಾರೆ.

ಇದೊಂದು ಅಪರೂಪದ ಘಟನೆಯಾಗಿದೆ, ಕೃತಕ ಸ್ತನ ಇಲ್ಲದಿದ್ದರೆ ಮಹಿಳೆ ಬದುಕುವ ಸಂಭವವೇ ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...