alex Certify ಕಾಯಿಲೆ ಬಗ್ಗೆ ತಿಳಿದುಕೊಳ್ಳಲು ʼಗೂಗಲ್‌ʼ ಮೊರೆ ಹೋಗುವ ಮುನ್ನ ಈ ಸ್ಟೋರಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಯಿಲೆ ಬಗ್ಗೆ ತಿಳಿದುಕೊಳ್ಳಲು ʼಗೂಗಲ್‌ʼ ಮೊರೆ ಹೋಗುವ ಮುನ್ನ ಈ ಸ್ಟೋರಿ ಓದಿ

Woman leaves doctor in stitches after self-diagnosing herself with prostate cancer - Mirror Onlineಗೂಗಲ್​ನಲ್ಲಿ ನೀವು ಯಾವುದೇ ಪ್ರಶ್ನೆಗಳನ್ನ ಕೇಳಿದ್ರೂ ಸಹ ನಿಮಗೆ ಒಂದಿಲ್ಲೊಂದು ಉತ್ತರ ಸಿಕ್ಕೇ ಸಿಗುತ್ತೆ. ಎಲ್ಲಾ ಬಾರಿಯೂ ನಿಮಗೆ ಸಿಗುವ ಉತ್ತರ ಸರಿಯಾದದ್ದೇ ಎಂದು ಹೇಳಲು ಆಗೋದಿಲ್ಲ. ಇದೇ ರೀತಿ ಹೊಟ್ಟೆನೋವಿನಿಂದ ಬಳಲುತ್ತಿದ್ದ ಇಂಗ್ಲೆಂಡ್​​ನ ಮಹಿಳೆಯೊಬ್ಬರು ಇಂಟರ್ನೆಟ್​ನಲ್ಲಿ ಈ ಬಗ್ಗೆ ಹುಡುಕಾಟ ನಡೆಸಿದ್ದರು. ಆದರೆ ಇಂಟರ್ನೆಟ್​ನಲ್ಲಿ ಕಂಡ ಉತ್ತರವನ್ನ ಕಂಡು ಮಹಿಳೆ ಶಾಕ್​ ಆಗಿದ್ದಾರೆ.

ಆಕೆಯ ದೇಹದಲ್ಲಿದ್ದ ಲಕ್ಷಣಕ್ಕೂ ಇಂಟರ್ನೆಟ್​ನಲ್ಲಿದ್ದ ವಿವರಣೆಯನ್ನ ನೋಡಿದ ಬಳಿಕ ಆಕೆ ತನಗೆ ಪ್ರೊಸ್ಟೇಟ್​ ಕ್ಯಾನ್ಸರ್​ ಇದೆ ಎಂದೇ ಭಾವಿಸಿದ್ದಾರೆ. ತಮ್ಮ ಈ ಅನುಭವವನ್ನ ಟಿಕ್​ಟಾಕ್​ನಲ್ಲಿ ಶೇರ್​ ಮಾಡಿದ್ದಾರೆ.

ತಮಗೆ ಕ್ಯಾನ್ಸರ್ ಇದೆ ಎಂದು ಭಾವಿಸಿದ ಮಹಿಳೆ ಕೂಡಲೇ ವೈದ್ಯರ ಭೇಟಿಗೆ ಅಪಾಯಿಂಟ್​ಮೆಂಟ್​ ಪಡೆದಿದ್ದಾರೆ. ಆದರೆ ಈಕೆಯನ್ನ ಪರೀಕ್ಷಿಸಿದ ವೈದ್ಯರು ಒಂದೇ ಬಾರಿಗೆ ನಗಲು ಆರಂಭಿಸಿದ್ದಾರೆ.

ಈ ವಿಡಿಯೋದಲ್ಲಿ ಈ ರೀತಿ ಬರೆಯಲಾಗಿದೆ: ಜೆನ್ನಿಗೆ ಹೊಟ್ಟೆ ನೋವಿತ್ತು. ಆದರೆ ಜೆನ್ನಿ ಆರಾಮಾಗಿ ಇದ್ದಳು. ಆದರೂ ಜೆನ್ನಿ ಆರಾಮಾಗಿ ಇರಲಿಲ್ಲ. ವೈದ್ಯರ ಬಳಿ ನನ್ನ ಪ್ರಾಸ್ಟೇಟ್​ ಪರೀಕ್ಷೆ ಮಾಡಿ ಎಂದಾಗ ಅವರು ನಗಲು ಆರಂಭಿಸಿದ್ದರು. ಯಾಕೆಂದೆರೆ ಜೆನ್ನಿ ಬಳಿ ಪ್ರಾಸ್ಟೇಟ್​ ಗ್ರಂಥಿಯೇ ಇರಲಿಲ್ಲ.

ಪ್ರಾಸ್ಟೇಟ್​ ಕ್ಯಾನ್ಸರ್​ ಪುರುಷರಿಗೆ ಬರುವ ಕ್ಯಾನ್ಸರ್​ ಆಗಿದೆ. ಪುರುಷರ ಜನನೇಂದ್ರಿಯದಲ್ಲಿರುವ ಪ್ರಾಸ್ಟೇಟ್​ ಎಂಬ ಗ್ರಂಥಿ ಇರಲಿದೆ. ವೀರ್ಯಾಣುಗಳು ಕಾಲ ಕಾಲಕ್ಕೆ ಖಾಲಿಯಾಗದೇ ಇದ್ದಲ್ಲಿ ಈ ಕ್ಯಾನ್ಸರ್​ ಸಂಭವಿಸುತ್ತದೆ.

View this post on Instagram

A post shared by ????? ?????? | ????????? (@adventure_jenny)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...