ಗೂಗಲ್ನಲ್ಲಿ ನೀವು ಯಾವುದೇ ಪ್ರಶ್ನೆಗಳನ್ನ ಕೇಳಿದ್ರೂ ಸಹ ನಿಮಗೆ ಒಂದಿಲ್ಲೊಂದು ಉತ್ತರ ಸಿಕ್ಕೇ ಸಿಗುತ್ತೆ. ಎಲ್ಲಾ ಬಾರಿಯೂ ನಿಮಗೆ ಸಿಗುವ ಉತ್ತರ ಸರಿಯಾದದ್ದೇ ಎಂದು ಹೇಳಲು ಆಗೋದಿಲ್ಲ. ಇದೇ ರೀತಿ ಹೊಟ್ಟೆನೋವಿನಿಂದ ಬಳಲುತ್ತಿದ್ದ ಇಂಗ್ಲೆಂಡ್ನ ಮಹಿಳೆಯೊಬ್ಬರು ಇಂಟರ್ನೆಟ್ನಲ್ಲಿ ಈ ಬಗ್ಗೆ ಹುಡುಕಾಟ ನಡೆಸಿದ್ದರು. ಆದರೆ ಇಂಟರ್ನೆಟ್ನಲ್ಲಿ ಕಂಡ ಉತ್ತರವನ್ನ ಕಂಡು ಮಹಿಳೆ ಶಾಕ್ ಆಗಿದ್ದಾರೆ.
ಆಕೆಯ ದೇಹದಲ್ಲಿದ್ದ ಲಕ್ಷಣಕ್ಕೂ ಇಂಟರ್ನೆಟ್ನಲ್ಲಿದ್ದ ವಿವರಣೆಯನ್ನ ನೋಡಿದ ಬಳಿಕ ಆಕೆ ತನಗೆ ಪ್ರೊಸ್ಟೇಟ್ ಕ್ಯಾನ್ಸರ್ ಇದೆ ಎಂದೇ ಭಾವಿಸಿದ್ದಾರೆ. ತಮ್ಮ ಈ ಅನುಭವವನ್ನ ಟಿಕ್ಟಾಕ್ನಲ್ಲಿ ಶೇರ್ ಮಾಡಿದ್ದಾರೆ.
ತಮಗೆ ಕ್ಯಾನ್ಸರ್ ಇದೆ ಎಂದು ಭಾವಿಸಿದ ಮಹಿಳೆ ಕೂಡಲೇ ವೈದ್ಯರ ಭೇಟಿಗೆ ಅಪಾಯಿಂಟ್ಮೆಂಟ್ ಪಡೆದಿದ್ದಾರೆ. ಆದರೆ ಈಕೆಯನ್ನ ಪರೀಕ್ಷಿಸಿದ ವೈದ್ಯರು ಒಂದೇ ಬಾರಿಗೆ ನಗಲು ಆರಂಭಿಸಿದ್ದಾರೆ.
ಈ ವಿಡಿಯೋದಲ್ಲಿ ಈ ರೀತಿ ಬರೆಯಲಾಗಿದೆ: ಜೆನ್ನಿಗೆ ಹೊಟ್ಟೆ ನೋವಿತ್ತು. ಆದರೆ ಜೆನ್ನಿ ಆರಾಮಾಗಿ ಇದ್ದಳು. ಆದರೂ ಜೆನ್ನಿ ಆರಾಮಾಗಿ ಇರಲಿಲ್ಲ. ವೈದ್ಯರ ಬಳಿ ನನ್ನ ಪ್ರಾಸ್ಟೇಟ್ ಪರೀಕ್ಷೆ ಮಾಡಿ ಎಂದಾಗ ಅವರು ನಗಲು ಆರಂಭಿಸಿದ್ದರು. ಯಾಕೆಂದೆರೆ ಜೆನ್ನಿ ಬಳಿ ಪ್ರಾಸ್ಟೇಟ್ ಗ್ರಂಥಿಯೇ ಇರಲಿಲ್ಲ.
ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರಿಗೆ ಬರುವ ಕ್ಯಾನ್ಸರ್ ಆಗಿದೆ. ಪುರುಷರ ಜನನೇಂದ್ರಿಯದಲ್ಲಿರುವ ಪ್ರಾಸ್ಟೇಟ್ ಎಂಬ ಗ್ರಂಥಿ ಇರಲಿದೆ. ವೀರ್ಯಾಣುಗಳು ಕಾಲ ಕಾಲಕ್ಕೆ ಖಾಲಿಯಾಗದೇ ಇದ್ದಲ್ಲಿ ಈ ಕ್ಯಾನ್ಸರ್ ಸಂಭವಿಸುತ್ತದೆ.
https://www.instagram.com/p/COaDynoBmUz/?utm_source=ig_web_copy_link