ಪ್ರೇಮಿಯ ದ್ವೇಷಕ್ಕಿಂತ ಭಯಾನಕವಾದದ್ದು ಮತ್ತೊಂದಿಲ್ಲ ಎಂಬ ಮಾತಿದೆ. ಪ್ರೀತಿ ಮಾಡಿದ ಬಳಿಕ ನಂಬಿಕೆ ಉಳಿಸಿಕೊಳ್ಳೋದು ಕೂಡ ಅಷ್ಟೇ ಮುಖ್ಯ. ಆದರೆ ಈ ನಂಬಿಕೆಯನ್ನ ಉಳಿಸಿಕೊಳ್ಳಲು ಅಶಕ್ತನಾದ ಬಾಯ್ಫ್ರೆಂಡ್ಗೆ ಆತನ ಪ್ರೇಯಸಿ ಸರಿಯಾದ ಪಾಠವನ್ನೇ ಕಲಿಸಿದ್ದಾಳೆ.
ಟಿಕ್ಟಾಕ್ ಬಳಕೆದಾರರಾದ ಎಮೆಲಿ ಎಂಬವರ ಬಾಯ್ಫ್ರೆಂಡ್ ಆಕೆಗೆ ನಂಬಿಕೆ ದ್ರೋಹ ಮಾಡಿದ್ದ. ಆತ ಬರೋಬ್ಬರಿ ಮೂವರು ಹುಡುಗಿಯರ ಜೊತೆ ತುಂಬಾ ಆತ್ಮೀಯವಾಗಿ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ.
ಇದನ್ನ ಸಾಕ್ಷ್ಯ ಸಮೇತ ಕಂಡು ಹಿಡಿದ ಎಮೆಲಿ ಆತ ಮಾಡಿರುವ ಎಲ್ಲಾ ಮೆಸೇಜ್ಗಳ ಸ್ಕ್ರೀನ್ ಶಾಟ್ ತೆಗೆದು ಬಳಿಕ ಪ್ರಿಂಟ್ ಮಾಡಿಸಿ ಗೋಡೆ ತುಂಬಾ ಅಂಟಿಸಿದ್ದಾಳೆ.
ಆತನ ಗೋಡೆ ತುಂಬಾ ಎಲ್ಲಾ ಸಂದೇಶಗಳ ಸ್ಕ್ರೀನ್ ಶಾಟ್ ಅಂಟಿಸಿದ ಎಮೆಲಿ ಫೋನ್ ನಂಬರ್ ಹಾಗೂ ಡಿಪಿಯನ್ನ ಮರೆ ಮಾಡಿದ್ದಾಳೆ. ಹತ್ತಿರದ ಅಂಗಡಿಯಿಂದ ಪ್ಲಾಸ್ಟರ್ನ್ನು ತಂದು ಆದನ್ನ ಆತನ ಕೋಣೆಯ ಗೋಡೆಗೆ ಅಂಟಿಸಲು 2 ಗಂಟೆ ಅವಧಿ ತೆಗೆದುಕೊಂಡಿದ್ದಾಳೆ. ಅಲ್ಲದೇ ಆತನಿಗೆ ಮೆಸೇಜ್ ಮಾಡಿ ನಿನಗೊಂದು ಸಪ್ರೈಸ್ ಕಾದಿದೆ ಎಂದು ಹೇಳಿದ್ದಾಳೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.