alex Certify ಮೋಸ ಮಾಡಿದ ಬಾಯ್​ ಫ್ರೆಂಡ್​ಗೆ ಬುದ್ದಿ ಕಲಿಸಲು ಈಕೆ ಮಾಡಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋಸ ಮಾಡಿದ ಬಾಯ್​ ಫ್ರೆಂಡ್​ಗೆ ಬುದ್ದಿ ಕಲಿಸಲು ಈಕೆ ಮಾಡಿದ್ದೇನು ಗೊತ್ತಾ….?

ಪ್ರೇಮಿಯ ದ್ವೇಷಕ್ಕಿಂತ ಭಯಾನಕವಾದದ್ದು ಮತ್ತೊಂದಿಲ್ಲ ಎಂಬ ಮಾತಿದೆ. ಪ್ರೀತಿ ಮಾಡಿದ ಬಳಿಕ ನಂಬಿಕೆ ಉಳಿಸಿಕೊಳ್ಳೋದು ಕೂಡ ಅಷ್ಟೇ ಮುಖ್ಯ. ಆದರೆ ಈ ನಂಬಿಕೆಯನ್ನ ಉಳಿಸಿಕೊಳ್ಳಲು ಅಶಕ್ತನಾದ ಬಾಯ್​ಫ್ರೆಂಡ್​ಗೆ ಆತನ ಪ್ರೇಯಸಿ ಸರಿಯಾದ ಪಾಠವನ್ನೇ ಕಲಿಸಿದ್ದಾಳೆ.

ಟಿಕ್​ಟಾಕ್​ ಬಳಕೆದಾರರಾದ ಎಮೆಲಿ ಎಂಬವರ ಬಾಯ್​ಫ್ರೆಂಡ್​ ಆಕೆಗೆ ನಂಬಿಕೆ ದ್ರೋಹ ಮಾಡಿದ್ದ. ಆತ ಬರೋಬ್ಬರಿ ಮೂವರು ಹುಡುಗಿಯರ ಜೊತೆ ತುಂಬಾ ಆತ್ಮೀಯವಾಗಿ ಮೆಸೇಜ್​ ಮಾಡುತ್ತಿದ್ದ ಎನ್ನಲಾಗಿದೆ.

ಇದನ್ನ ಸಾಕ್ಷ್ಯ ಸಮೇತ ಕಂಡು ಹಿಡಿದ ಎಮೆಲಿ ಆತ ಮಾಡಿರುವ ಎಲ್ಲಾ ಮೆಸೇಜ್​ಗಳ ಸ್ಕ್ರೀನ್​ ಶಾಟ್​ ತೆಗೆದು ಬಳಿಕ ಪ್ರಿಂಟ್​ ಮಾಡಿಸಿ ಗೋಡೆ ತುಂಬಾ ಅಂಟಿಸಿದ್ದಾಳೆ.

ಆತನ ಗೋಡೆ ತುಂಬಾ ಎಲ್ಲಾ ಸಂದೇಶಗಳ ಸ್ಕ್ರೀನ್​ ಶಾಟ್​​ ಅಂಟಿಸಿದ ಎಮೆಲಿ ಫೋನ್​ ನಂಬರ್​ ಹಾಗೂ ಡಿಪಿಯನ್ನ ಮರೆ ಮಾಡಿದ್ದಾಳೆ. ಹತ್ತಿರದ ಅಂಗಡಿಯಿಂದ ಪ್ಲಾಸ್ಟರ್​ನ್ನು ತಂದು ಆದನ್ನ ಆತನ ಕೋಣೆಯ ಗೋಡೆಗೆ ಅಂಟಿಸಲು 2 ಗಂಟೆ ಅವಧಿ ತೆಗೆದುಕೊಂಡಿದ್ದಾಳೆ. ಅಲ್ಲದೇ ಆತನಿಗೆ ಮೆಸೇಜ್​ ಮಾಡಿ ನಿನಗೊಂದು ಸಪ್ರೈಸ್ ಕಾದಿದೆ ಎಂದು ಹೇಳಿದ್ದಾಳೆ. ಈ ವಿಡಿಯೋ ಸಖತ್​ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...