ತನ್ನ ಪತಿಯ ಫೋನ್ ಅನ್ನು ಕದ್ದು ನೋಡಿದ ಕಾರಣ ಆತನ ಖಾಸಗಿತನಕ್ಕೆ ಧಕ್ಕೆಯಾಗಿದ್ದು, ಇದಕ್ಕಾಗಿ 4,500 ದಿರ್ಹಮ್ (ಒಂದು ಲಕ್ಷ ರೂ.) ದಂಡ ಕಟ್ಟಿಕೊಡುವಂತೆ ಅರಬ್ ಮಹಿಳೆಯೊಬ್ಬರಿಗೆ ದುಬೈ ಬಳಿಯ ರಸ್ ಅಲ್ ಕೈಮಾ ನ್ಯಾಯಾಲಯವೊಂದು ಆದೇಶ ಕೊಟ್ಟಿದೆ.
ಪತಿಯ ಚಿತ್ರಗಳನ್ನು ಕಳುಹಿಸಿ ಆತನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನ ಮಾಡಿದ ಆರೋಪವೂ ಈ ಮಹಿಳೆಯ ಮೇಲಿದೆ. ತನ್ನ ಮೇಲೆ ಮಡದಿ ಹೀಗೆ ಮಾಡಿದ್ದಕ್ಕೆ ಪರಿಹಾರ ಕಟ್ಟಿಕೊಡುವಂತೆ ಕೋರಿ ಆಕೆಯ ಪತಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರೊಂದಿಗೆ ಕೆಲಸ ಕಳೆದುಕೊಂಡಿರುವ ತನಗೆ ಸಂಬಳ ಬರುತ್ತಿಲ್ಲವಾದ ಕಾರಣ ಅಟಾರ್ನಿಗೆ ಶುಲ್ಕ ಕಟ್ಟಲೂ ಸಹ ದುಡ್ಡಿಲ್ಲದೇ, ಅದನ್ನೂ ಆಕೆಯೇ ಕಟ್ಟಿಕೊಡಲಿ ಎಂದು ಆತ ಕೋರಿದ್ದಾನೆ.
ಕಂಟೈನ್‌ಮೆಂಟ್ ಜೋನ್ ನಲ್ಲಿ ಕಠಿಣ ಕ್ರಮ: ಸಂಚಾರ ಸಂಪೂರ್ಣ ನಿರ್ಬಂಧಕ್ಕೆ ಆದೇಶ
ಇದಕ್ಕೆ ಪ್ರತಿವಾದ ಮಾಡಿದ ಮಡದಿ ಪರ ವಕೀಲರು, ತಮ್ಮ ಕಕ್ಷೀದಾರರನ್ನು ಆಕೆಯ ಪತಿ ದೈಹಿಕವಾಗಿ ಹಲ್ಲೆ ನಡಸಿದ್ದಲ್ಲದೇ, ಮನೆಯಿಂದ ಹೊರಹಾಕಿದ ಕಾರಣ ಅವರ ಮಗಳಿಗೆ ಯಾವುದೇ ಬೆಂಬಲ ಸಿಕ್ಕಿಲ್ಲವೆಂದು ವಾದ ಮಾಡಿದ್ದಾರೆ.
ಪಾರ್ಟಿ ಫೋಟೋದಲ್ಲಿ ’ಭೂತ’ ಕಂಡು ಬೆಚ್ಚಿ ಬಿದ್ದ ಯುವತಿ…!
ತನ್ನ ಮಡದಿಯಿಂದಾಗಿ ಕೆಲಸ ಕಳೆದುಕೊಳ್ಳಬೇಕಾಗಿ ಬಂತು ಎಂದ ಪತಿಯ ವಾದವನ್ನು ತಳ್ಳಿಹಾಕಿರುವ ನ್ಯಾಯಾಲಯ, ಆತನ ಪತ್ನಿಗೆ 4,500 ದಿರ್ಹಮ್ ದಂಡದೊಂದಿಗೆ ಆತನ ಲೀಗಲ್ ಹೋರಾಟದ ಖರ್ಚನ್ನೂ ಭರಿಸಿಕೊಡಲು ಆದೇಶಿಸಿದೆ.