ಶ್ರವಣ ದೋಷವಿರುವ ನಾಯಿಯೊಂದನ್ನು ಸಾಕಿರುವ ಮಹಿಳೆಯೊಬ್ಬರು ತಮ್ಮ ಮುದ್ದಿನ ನಾಯಿ ಮೊದಲ ಬಾರಿಗೆ ’ಬೊಗಳುವ’ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮ್ಯಾಟ್ ಮೇಲೆ ಕುಳಿತಿರುವ ನಾಯಿಯು, ಬೊಗಳಲು ಮತ್ತೆ ಮತ್ತೆ ಯತ್ನಿಸಿ ಕೊನೆಗೆ ಪಿಸುದನಿ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. “ಶಬ್ದ ಬರುತ್ತೋ, ಬರೋದಿಲ್ವೋ, ಅವೆಲ್ಲಾ ಲೆಕ್ಕಕ್ಕೆ ಬರುವುದಿಲ್ಲ” ಎಂದು ಈ ವಿಡಿಯೋಗೆ ಕ್ಯಾಪ್ಷನ್ ಹಾಕಲಾಗಿದೆ.
“ನನ್ನ ನಾಯಿಗೆ ಕಿವಿ ಕೇಳದು. ಅವಳು ಬೇರೆ ನಾಯಿಗಳು ಬೊಗಳುವುದನ್ನು ನೋಡಿದರೂ ಸಹ ತಾನು ಏನು ಮಾಡಬೇಕೆಂದು ತೋಚುತ್ತಿರಲಿಲ್ಲ” ಎಂದು ನಾಯಿಯ ಯಜಮಾನಿ ಲಿಂಡ್ಸೆ ತಿಳಿಸಿದ್ದಾರೆ.