ಬ್ರಿಟನಿ ವಾಲ್ಶ್ ಎಂಬ ಹೆಸರಿನ ಮಹಿಳೆ ಬಹಳ ವಿಶೇಷವಾಗಿ ವಿಶ್ವ ದಾಖಲೆ ನಿರ್ಮಿಸುವ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ತಮ್ಮ ಪಾದಗಳ ಬಲದಿಂದ ಈಕೆ ವಿಶ್ವ ದಾಖಲೆಯ ಗೌರವಕ್ಕೆ ಭಾಜನರಾಗಿದ್ದಾರೆ. ಉಲ್ಟಾ ನಿಂತು ತಮ್ಮ ಪಾದಗಳ ಸಹಾಯದಿಂದ ಬಾಣ ಬಿಡುವ ಮೂಲಕ ಸಾಧನೆ ಮಾಡಿದ್ದಾರೆ.
ಗಿನ್ನೆಸ್ ವಿಶ್ವ ದಾಖಲೆಯ ಇನ್ಸ್ಟಾಗ್ರಾಂ ಪೇಜ್ನಲ್ಲಿ ಈ ಸಾಧನೆಯನ್ನ ಪೋಸ್ಟ್ ಮಾಡಲಾಗಿದೆ. ಬ್ರಿಟನಿ ವಾಲ್ಶ್ ತಮ್ಮ ಪಾದಗಳ ಸಹಾಯದಿಂದ 12.31 ಮೀಟರ್ ಉದ್ದಕ್ಕೆ ಬಾಣ ಚಲಾಯಿಸಿದ್ದಾರೆ ಎಂದು ಶೀರ್ಷಿಕೆ ನೀಡಲಾಗಿದೆ.
ವಾಲ್ಶ್ ಸರ್ಕಸ್ ಹಾಗೂ ಥಿಯೇಟರ್ನಲ್ಲಿ ಪ್ರದರ್ಶನ ನೀಡ್ತಾರೆ. ಇವರ ಎರೋಬಿಕ್ ಸ್ಕಿಲ್ಗಳು ಇಂದು ವಿಶ್ವ ದಾಖಲೆಯ ಗರಿಯನ್ನ ನೀಡೋಕೆ ಸಹಾಯ ಮಾಡಿದೆ. ಇನ್ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಮಹಿಳೆಯ ಸಾಧನೆಯನ್ನ ಕೊಂಡಾಡಿದ್ದಾರೆ.