alex Certify ಹಣ ಉಳಿತಾಯದ ಗುಟ್ಟು ಬಿಚ್ಚಿಟ್ಟ ಮಹಿಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ಉಳಿತಾಯದ ಗುಟ್ಟು ಬಿಚ್ಚಿಟ್ಟ ಮಹಿಳೆ….!

ತಿಂಗಳಿನ ಆರಂಭದಲ್ಲಿ ನಾವು ಈ ತಿಂಗಳಿನಿಂದ ಹಣ ಉಳಿತಾಯ ಮಾಡಬೇಕು ಅಂತಾ ಸಂಕಲ್ಪ ಮಾಡ್ತೇವೆ. ಆದರೆ ಉಳಿತಾಯ ಮಾಡೋದು ಎಲ್ಲರಿಂದಲೂ ಆಗುವ ಕೆಲಸವಂತೂ ಅಲ್ಲವೇ ಅಲ್ಲ. ಆದರೆ ಯಾವುದೇ ಕಷ್ಟವಿಲ್ಲದೇ ಹಣ ಉಳಿತಾಯ ಮಾಡೋದು ಹೇಗೆ ಅಂತಾ ಮಹಿಳೆಯೊಬ್ಬರು ಪ್ಲಾನ್​ ಹೇಳಿಕೊಟ್ಟಿದ್ದಾರೆ.

ಆಸ್ಟ್ರೇಲಿಯಾದ ಜಾನೆಲ್ಲೆ ಎಂಬ ಹೆಸರಿನ ಮಹಿಳೆ ಪ್ರತಿ ಬಾರಿ ಸೂಪರ್​ ಮಾರ್ಕೆಟ್​​ನಲ್ಲಿ ಶಾಪಿಂಗ್​ ಮಾಡಿದ ಬಳಿಕ ಅಲ್ಲಿ ಉಳಿತಾಯವಾದ ಹಣವನ್ನ ತಮ್ಮ ಸೇವಿಂಗ್ಸ್​ ಅಕೌಂಟ್​​ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ಸೂಪರ್​ ಮಾರ್ಕೆಟ್​​ನ ರಶೀದಿಯನ್ನೂ ಮಹಿಳೆ ಶೇರ್​ ಮಾಡಿದ್ದಾರೆ. ಇದರಲ್ಲಿ ಆಕೆ 27 ಡಾಲರ್​ ಉಳಿತಾಯ ಮಾಡಿದ್ದಾರೆ.

ಕಳೆದ ವರ್ಷ ಜನವರಿಯಿಂದ ಈ ಮಹಿಳೆ ಈ ರೀತಿ ಉಳಿತಾಯವಾದ ಹಣವನ್ನ ತಮ್ಮ ಸೇವಿಂಗ್ಸ್​ ಖಾತೆಗೆ ಹಾಕಿಕೊಂಡಿದ್ದಾರೆ. ಈ ಮೂಲಕ ಒಟ್ಟು 1.42 ಲಕ್ಷ ರೂಪಾಯಿ ಸಂಗ್ರಹ ಮಾಡಿದ್ದಾರೆ. ಈ ಹಣ ಉಳಿತಾಯದ ಮಾರ್ಗವನ್ನ ನೆಟ್ಟಿಗರೂ ಮೆಚ್ಚಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...