ತಿಂಗಳಿನ ಆರಂಭದಲ್ಲಿ ನಾವು ಈ ತಿಂಗಳಿನಿಂದ ಹಣ ಉಳಿತಾಯ ಮಾಡಬೇಕು ಅಂತಾ ಸಂಕಲ್ಪ ಮಾಡ್ತೇವೆ. ಆದರೆ ಉಳಿತಾಯ ಮಾಡೋದು ಎಲ್ಲರಿಂದಲೂ ಆಗುವ ಕೆಲಸವಂತೂ ಅಲ್ಲವೇ ಅಲ್ಲ. ಆದರೆ ಯಾವುದೇ ಕಷ್ಟವಿಲ್ಲದೇ ಹಣ ಉಳಿತಾಯ ಮಾಡೋದು ಹೇಗೆ ಅಂತಾ ಮಹಿಳೆಯೊಬ್ಬರು ಪ್ಲಾನ್ ಹೇಳಿಕೊಟ್ಟಿದ್ದಾರೆ.
ಆಸ್ಟ್ರೇಲಿಯಾದ ಜಾನೆಲ್ಲೆ ಎಂಬ ಹೆಸರಿನ ಮಹಿಳೆ ಪ್ರತಿ ಬಾರಿ ಸೂಪರ್ ಮಾರ್ಕೆಟ್ನಲ್ಲಿ ಶಾಪಿಂಗ್ ಮಾಡಿದ ಬಳಿಕ ಅಲ್ಲಿ ಉಳಿತಾಯವಾದ ಹಣವನ್ನ ತಮ್ಮ ಸೇವಿಂಗ್ಸ್ ಅಕೌಂಟ್ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.
ಸೂಪರ್ ಮಾರ್ಕೆಟ್ನ ರಶೀದಿಯನ್ನೂ ಮಹಿಳೆ ಶೇರ್ ಮಾಡಿದ್ದಾರೆ. ಇದರಲ್ಲಿ ಆಕೆ 27 ಡಾಲರ್ ಉಳಿತಾಯ ಮಾಡಿದ್ದಾರೆ.
ಕಳೆದ ವರ್ಷ ಜನವರಿಯಿಂದ ಈ ಮಹಿಳೆ ಈ ರೀತಿ ಉಳಿತಾಯವಾದ ಹಣವನ್ನ ತಮ್ಮ ಸೇವಿಂಗ್ಸ್ ಖಾತೆಗೆ ಹಾಕಿಕೊಂಡಿದ್ದಾರೆ. ಈ ಮೂಲಕ ಒಟ್ಟು 1.42 ಲಕ್ಷ ರೂಪಾಯಿ ಸಂಗ್ರಹ ಮಾಡಿದ್ದಾರೆ. ಈ ಹಣ ಉಳಿತಾಯದ ಮಾರ್ಗವನ್ನ ನೆಟ್ಟಿಗರೂ ಮೆಚ್ಚಿಕೊಂಡಿದ್ದಾರೆ.